ಗೆಳೆತಿಯ ಕೊಲೆ ಪ್ರಕರಣ: ಆರೋಪಿ ಬಂಧನ
Update: 2023-02-15 21:06 IST
ಬೆಂಗಳೂರು, ಫೆ.15: ತನ್ನೊಂದಿಗೆ ಸಹಜೀವನ ನಡೆಸುತ್ತಿದ್ದ ಗೆಳತಿಯ ಕೊಲೆಗೈದ ಆರೋಪ ಪ್ರಕರಣ ಸಂಬಂಧ ಓರ್ವನನ್ನು ಇಲ್ಲಿನ ಅಶೋಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಕೌಸರ್ ಮುಬೀನಾ ಕೊಲೆಯಾದ ಗೆಳೆತಿ ಆಗಿದ್ದು, ಪ್ರಕರಣ ಸಂಬಂಧ ನದೀಂ ಪಾಷಾ ಎಂಬಾತನನ್ನು ಬಂಧಿಸಿ, ವಿಚಾರಣೆ ನಡೆಸಳಾಗುತ್ತಿದೆ.
ದೂರದ ಸಂಬಂಧಿಕರಾಗಿದ್ದ ಕೌಸರ್ ನೊಂದಿಗೆ ನದೀಂ ಅಶೋಕನಗರದ ನಂಜಪ್ಪ ಸರ್ಕಲ್‍ನಲ್ಲಿ ಮನೆಮಾಡಿ ಕೊಂಡು ಒಟ್ಟಿಗೆವಾಸವಾಗಿದ್ದರು. ಸೋಮವಾರ ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿ ನದೀಂ ಚಾಕಿನಿಂದ ಇರಿದು ಅಂದು ಪರಾರಿಯಾಗಿದ್ದ. ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.