ಫೆ.17ರಂದು ಚರ್ವತ್ತೂರು-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಆರಂಭ
ಮಂಗಳೂರು, ಫೆ.15: ಚರ್ವತ್ತೂರು-ಮಂಗಳೂರು ಸೆಂಟ್ರಲ್ ಡೈಲಿ ಅನ್ ರಿಸರ್ವ್ಡ್ ಎಕ್ಸ್‌ಪ್ರೆಸ್ ರೈಲು (06491) ಫೆ.17ರಿಂದ ಕಲಾನಾಡ್ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯೊಂದಿಗೆ ಓಡಾಟ ಆರಂಭಿಸಲಿದೆ. ಶುಕ್ರವಾರ ಕಳನಾಡ್ ನಿಲ್ದಾಣದಕ್ಕೆ ರೈಲು ಬೆಳಗ್ಗೆ 06:49ಕ್ಕೆ ಆಗಮಿಸಲಿದ್ದು, 06:50ಕ್ಕೆ ನಿರ್ಗಮಿಸಲಿದೆ.
ರೈಲು ಸಂಖ್ಯೆ 06491 ಚರ್ವತ್ತೂರು - ಮಂಗಳೂರು ಸೆಂಟ್ರಲ್ ದೈನಂದಿನ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ಫೆ 17ರಂದು ಜಾರಿಗೆ ಬರುವಂತೆ ಇಂತಿವೆ.
ನಿಲ್ದಾಣ ಆಗಮನ /ನಿರ್ಗಮನ (ಗಂಟೆಗಳಲ್ಲಿ ಸಮಯ.)
ಚರ್ವತ್ತೂರು 06:10 (ನಿರ್ಗಮನ)
ನೀಲೇಶ್ವರ 06:19/06:20
ಕಾಞಂಗಾಡ್ 06:29/06:30
ಬೇಕಲ ಕೋಟೆ 06:34/06:35
ಕೋಟಿಕುಲಂ 06:44/06:45
ಕಳನಾಡ್ ಹಾಲ್ಟ್ 06:49/06:50
ಕಾಸರಗೋಡು 06:53/06:54
ಕುಂಬಳೆ 07:04/07:05
ಉಪ್ಪಳ 07:14/07:15
ಮಂಜೇಶ್ವರ 07:24/07:25
ಉಳ್ಳಾಲ 07:34/07:35
ಮಂಗಳೂರು ಸೆಂಟ್ರಲ್ 08:30 (ಆಗಮನ)
ಕಳನಾಡ್ ರೈಲು ನಿಲ್ದಾಣದಲ್ಲಿ ನಿಲುಗಡೆ ಹೊಂದಿರುವ ರೈಲು ಸೇವೆಗಳು:
ರೈಲು ಸಂಖ್ಯೆ 06477 ಕಣ್ಣೂರು-ಮಂಗಳೂರು ಕೇಂದ್ರ ಕಾಯ್ದಿರಿಸದ ಎಂಇಎಂಯು ಎಕ್ಸ್‌ಪ್ರೆಸ್ ವಿಶೇಷ ರೈಲು ಕಳನಾಡ್‌ಗೆ ಬೆಳಗ್ಗೆ 9:24ಕ್ಕೆ ಆಗಮಿಸಲಿದ್ದು, 09:25 ಗಂಟೆಗೆ ನಿರ್ಗಮಿಸಲಿದೆ.
ರೈಲು ಸಂಖ್ಯೆ 06478 ಮಂಗಳೂರು ಸೆಂಟ್ರಲ್ - ಕಣ್ಣೂರು ಕಾಯ್ದಿರಿಸದ ಎಂಇಎಂಯು ಎಕ್ಸ್‌ಪ್ರೆಸ್
ಕಲಾನಾಡ್‌ಗೆ ಸಂಜೆ 18:04ಕ್ಕೆ ಆಗಮಿಸಲಿದ್ದು, 18.05 ಗಂಟೆಗೆ ನಿರ್ಗಮಿಸಲಿದೆ ಎಂದು ದಕ್ಷಿಣ ರೈಲ್ವೆಯ ಪ್ರಕಟನೆ ತಿಳಿಸಿದೆ.