×
Ad

ಬೆಂಗಳೂರು: ನಾಪತ್ತೆಯಾಗಿದ್ದ ಮಹಿಳೆ ಪತ್ತೆ

Update: 2023-02-15 22:44 IST

ಬೆಂಗಳೂರು, ಫೆ.16: ನಾಪತ್ತೆಯಾಗಿದ್ದ ನಗರದ ಬೆನ್ಸನ್ ಟೌನ್ ನಿವಾಸಿ ಬಿಲ್ಕಿಸ್ ಫಾತಿಮಾ (51) ಗುರುವಾರ ಪತ್ತೆಯಾಗಿದ್ದಾರೆ. 

ಮಾನಸಿಕ ಖಿನ್ನತೆ ಒಳಗಾಗಿದ್ದ ಬಿಲ್ಕಿಸ್ ಫಾತಿಮಾ ಫೆಬ್ರವರಿ 13ರಂದು ಮನೆಯಲ್ಲಿ ಯಾರಿಗೂ ತಿಳಿಸದೆ ಹೊರಗೆ ಹೋಗಿದ್ದು ಆನಂತರ ಎಷ್ಟು ಸಮಯವಾದರೂ ವಾಪಸ್ಸು ಬಂದಿಲ್ಲ ಎಂದು ಆಕೆಯ ಪತಿ ಇನಾಯತ್ ವುಲ್ಲಾ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದರು.

ಸದ್ಯ ಬಿಲ್ಕಿಸ್ ಫಾತಿಮಾ ಗುರುವಾರ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. 

Similar News