×
Ad

ಮಂಗಳೂರು: ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ

Update: 2023-02-16 22:16 IST

ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಬಸ್ ನಿಲ್ದಾಣದಲ್ಲಿ ನವಜಾತ ಶಿಶುವೊಂದು ಗುರುವಾರ ಪತ್ತೆಯಾಗಿರುವುದಾಗಿ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.

ಹೆತ್ತವರು ಬಿಟ್ಟು ಹೋದ ಈ ಗಂಡು ಮಗುವಿನ ತಲೆಯಲ್ಲಿ ಸಣ್ಣ ಗಾಯವಿದೆ. ಪಾಂಡೇಶ್ವರ ಪೊಲೀಸರು 10 ದಿನದ ಈ ಮಗುವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ಆರೋಗ್ಯ ಸ್ಥಿರವಾಗಿರದ ಕಾರಣ ಐಸಿಯುನಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.

Similar News