ಮೀನುಗಾರಿಕೆಗೆ ತೆರಳಿದ್ದ ಯುವಕ ನಾಪತ್ತೆ
Update: 2023-02-16 22:24 IST
ಮಂಗಳೂರು: ನಗರದ ಬಂದರ್ ದಕ್ಕೆಯಿಂದ ಮೀನುಗಾರಿಕೆಗೆ ತೆರಳಿದ್ದ ಕಾಶಿನಾಥ ಹನುಮಗೌಡ (31) ಎಂಬವರು ಕಾಣೆಯಾದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
ಕಾಶಿನಾಥರು ಫೆ.೧೨ರಂದು ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಫೆ.೧೩ರಂದು ರಾತ್ರಿ ಕಾಶಿನಾಥ ಕಾಣೆಯಾಗಿದ್ದು, ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿರಬೇಕು ಎಂದು ಶಂಕಿಸಿ ಅವರ ಸಹೋದರ ಸಂದೀಪ್ ಹನುಮಗೌಡ ದೂರು ನೀಡಿದ್ದಾರೆ.