ಶಿಕ್ಷಣ ವ್ಯವಸ್ಥೆ ಶೋಚನೀಯ ಸ್ಥಿತಿಗೆ ತಲುಪಿಸುವ ಬಜೆಟ್: ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ.

Update: 2023-02-17 13:29 GMT

ಬೆಂಗಳೂರು: ‘ಕರ್ನಾಟಕದ ಶಿಕ್ಷಣ ವ್ಯವಸ್ಥೆ ಮತ್ತಷ್ಟು ಶೋಚನೀಯ ಪರಿಸ್ಥಿತಿಗೆ ಕಾಲಿಡುವ ಎಲ್ಲ ಲಕ್ಷಣಗಳು ಪ್ರಸಕ್ತ ವರ್ಷದ ಆಯವ್ಯಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ. ಪ್ರತಿಕ್ರಿಯಿಸಿದ್ದಾರೆ. 

ಕಳೆದ ಆಯವ್ಯಯದಲ್ಲಿ ಹೇಳಿದ ಪ್ರಮುಖ ಅಂಶಗಳು ಕೇವಲ ಭಾಷಣದ ಪುಸ್ತಕದಲ್ಲಿಯೇ ಉಳಿದಿದೆ. ಹಿಂದಿನ ಆಯವ್ಯಯದಲ್ಲಿ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ 37 ಅಪೌಷ್ಠಿಕತೆ ಪರಿಹಾರ ಕೇಂದ್ರಗಳನ್ನು ತೆರೆದು ಕ್ರಮ ತೆಗೆದುಕೊಳ್ಳುವ ಪ್ರಸ್ತಾಪವಿತ್ತು. ಆದರೆ, ಇಂದಿಗೂ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವ ವಿಷಯವನ್ನು ಸರಕಾರದ ವರದಿಯು ಖಚಿತಪಡಿಸಿದೆ ಎಂದು ತಿಳಿಸಿದ್ದಾರೆ. 

'15ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳುವ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಲಾದ ಅಂಶವು ಈ ವರ್ಷವು ಪ್ರಗತಿಯಲ್ಲಿಯೇ ಮುಂದುವರಿದೆ. ಮಕ್ಕಳಿಗೆ ವಾರದಲ್ಲಿ 5 ದಿನವೂ ಮೊಟ್ಟೆ ನೀಡುವ ಭರವಸೆಯಾಗಲಿ, ಅನುದಾನಕ್ಕಾಗಿ ಕಾಯುತ್ತಿರುವ ಕನ್ನಡ ಅನುದಾನರಹಿತ ಶಾಲೆಗಳಿಗೆ ಅನುದಾನ ಒದಗಿಸುವ ಅಥವಾ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಯಾವ ಅಂಶಗಳೂ ಆಯವ್ಯದಲ್ಲಿ ಕಾಣುತ್ತಿಲ್ಲ' ಎಂದು ನಿರಂಜನಾರಾಧ್ಯ ವಿ.ಪಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Similar News