×
Ad

Aero India 2023 | ಹೆಚ್‌ಎಎಲ್ ಯುದ್ಧ ವಿಮಾನದಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಹನುಮಂತನ ಚಿತ್ರ!

Update: 2023-02-17 20:57 IST

ಬೆಂಗಳೂರು: ಏರೋ ಇಂಡಿಯಾ ‘ಏರ್ ಶೋ 2023’ ರಲ್ಲಿ ಪ್ರದರ್ಶನದಲ್ಲಿದ್ದ ಹೆಚ್‌ಎಲ್‌ಎಫ್‌ಟಿ-42 ತರಬೇತುದಾರ ಯುದ್ಧ ವಿಮಾನದ ಹಿಂಭಾಗದಲ್ಲಿದ್ದ ಹನುಮಾನ್ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಹೆಚ್​ಎಎಲ್​ ಅಧಿಕಾರಿಗಳು ಹನುಮಾನ್​ ಚಿತ್ರವನ್ನು ತೆಗೆದು ಹಾಕಿದ್ದರು.

ಆದರೆ ಏರೋ ಇಂಡಿಯಾ ಏರ್​ ಶೋ ಕೊನೆಯ ದಿನವಾದ ಇಂದು ವಿಮಾನದ ಲಂಬವಾದ ರೆಕ್ಕೆ ಮೇಲೆ ಮತ್ತೆ ಹನುಮಾನ್​ ಚಿತ್ರ ಪ್ರತ್ಯಕ್ಷಗೊಂಡಿದೆ. 

ನಮಗೆ ದೊರಕಿದ ಆದೇಶದಂತೆ ನಾವು ಈರೀತಿ ಮಾಡಿದ್ದೇವೆಂದು ಹೆಸರು ಹೇಳಲಿಚ್ಚಿಸದ ಎಚ್‌ಎಎಲ್‌ ಅಧಿಕಾರಿಯೋರ್ವರು ಹೇಳಿಕೆ ನೀಡಿದ್ದಾರೆ.

Similar News