7ನೇ ವೇತನ ಆಯೋಗ ವರದಿ ಅನುಷ್ಠಾನಕ್ಕೆ 6 ಸಾವಿರ ಕೋಟಿ ರೂ.: ಸಿಎಂ ಬಸವರಾಜ ಬೊಮ್ಮಾಯಿ

Update: 2023-02-17 16:24 GMT

ಬೆಂಗಳೂರು, ಫೆ.17: ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಈಗಾಗಲೇ ಹಿಂದಿನ ಮುಖ್ಯಕಾರ್ಯದರ್ಶಿ ಸುಧಾಕರ್ ಅಧ್ಯಕ್ಷತೆಯಲ್ಲಿ 7ನೆ ವೇತನ ಆಯೋಗ ರಚಿಸಲಾಗಿದ್ದು, ಇದಕ್ಕಾಗಿಯೇ ಬಜೆಟ್‍ನಲ್ಲಿಯೇ 6ಸಾವಿರ ಕೋಟಿ ರೂ.ಮೀಸಲಿಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಹೆಚ್ಚುವರಿ ಹಣ ಅವಶ್ಯವಿದ್ದಲ್ಲಿ ಪೂರಕ ಬಜೆಟ್‍ನಲ್ಲಿ ಒದಗಿಸಲಾಗುವುದು. 2023-24ನೆ ಸಾಲಿನಲ್ಲಿಯೇ ವೇತನ ಆಯೋಗದ ವರದಿಗಳನ್ನು ಅನುಷ್ಠಾನಗೊಳಿಸಲಾಗುವುದು. ಆಯೋಗ ಮಧ್ಯಂತರ ವರದಿ ನೀಡುವುದೋ ಅಥವಾ ಪೂರ್ಣ ವರದಿ ಸಲ್ಲಿಸುವುದೋ ಅದರನುಸಾರ ಸರಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದರು.

Similar News