×
Ad

ಪಂಚಮಸಾಲಿ ಸಮುದಾಯಕ್ಕೆ 2 ‘ಎ’ ಮೀಸಲಾತಿ: ಮಾರ್ಚ್ 15ರ ವರೆಗೆ ಗಡುವು ನೀಡಿದ ಜಯ ಮೃತ್ಯುಂಜಯ ಸ್ವಾಮಿ

Update: 2023-02-18 21:32 IST

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಸರಕಾರ ಮಾರ್ಚ್ 15ರೊಳಗೆ ಕಲ್ಪಿಸದಿದ್ದರೆ ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿಯೂ ಹೋರಾಟ ಆರಂಭಿಸಲಾಗುವುದು ಎಂದು ಕೂಡಲಸಂಗಮದ ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ನಡೆದ ಪಂಚಮಸಾಲಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಮಾರ್ಚ್ 15ಕ್ಕೆ ಸರಕಾರಕ್ಕೆ ನಾವು ನೀಡುತ್ತಿರುವ ಕೊನೆಯ ಗಡುವಾಗಿದ್ದು, ಮೀಸಲಾತಿ ಕಲ್ಪಿಸದೇ ಹೋದರೆ 224 ಕ್ಷೇತ್ರಗಳಲ್ಲೂ ಧರಣಿ ನಡೆಸಿ, ಜನತಾ ನ್ಯಾಯಾಲಯದ ಮುಂದೆ ಸರಕಾರದ ಭವಿಷ್ಯವನ್ನು ಬರೆಯಲಿದ್ದೇವೆ ಎಂದು ಎಚ್ಚರಿಸಿದರು.

ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ಸಮುದಾಯ ಎರಡು ವರ್ಷಗಳಿಂದ ಹೋರಾಟ ಮಾಡಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೂ ಮೀಸಲಾತಿ ಕೊಡುವುದಾಗಿ ಹೇಳಿದ್ದರು. ಆದರೆ ಮೀಸಲಾತಿ ಕೊಡದೇ ಮೋಸ ಮಾಡಿದ್ದಾರೆ. ಆದುದರಿಂದ ಎಲ್ಲ ಕ್ಷೇತ್ರಗಳಿಗೆ ಹೋಗಿ ಪ್ರತಿಭಟನೆ ಮಾಡುತ್ತೇವೆ. ಸರಕಾರ ಮಾಡಿದ ಮೋಸವನ್ನು ಜನರ ಮುಂದಿಡುತ್ತೇವೆ ಎಂದು ತಿಳಿಸಿದರು.

Similar News