ಬೆಂಗಳೂರು| ಅನುಮತಿ ಇಲ್ಲದೆ ಹಿಂದಿ ಹಾಡು ಪ್ರಸಾರ ಆರೋಪ: ನಿವೃತ್ತ ಐಪಿಎಸ್ ಅಧಿಕಾರಿ ಸೇರಿ ನಾಲ್ವರ ವಿರುದ್ಧ ಪ್ರಕರಣ

Update: 2023-02-19 15:15 GMT

ಬೆಂಗಳೂರು: ಅನುಮತಿ ಪಡೆಯದೆ ಕ್ಲಬ್‍ನಲ್ಲಿ ಹಿಂದಿ ಹಾಡುಗಳನ್ನು ಪ್ರಸಾರ ಮಾಡಿದ ಆರೋಪದಡಿ ನಿವೃತ್ತ ಐಪಿಎಸ್ ಅಧಿಕಾರಿ ಬಿಎನ್‍ಎಸ್ ರೆಡ್ಡಿ ಸೇರಿ ನಾಲ್ವರ ವಿರುದ್ಧ ಇಲ್ಲಿನ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಎನ್‍ಎಸ್ ರೆಡ್ಡಿ ಅಧ್ಯಕ್ಷರಾಗಿರುವ ಇಂದಿರಾನಗರ ಕ್ಲಬ್‍ನಲ್ಲಿ2019ರ ಮಾರ್ಚ್ 21ರಂದು ಇಂದಿರಾನಗರದ ಕ್ಲಬ್‍ನಲ್ಲಿ ನಡೆದಿದ್ದ ಮಹೋಲಿ ಎಕ್ಸ್ ಡಿವೈನ್ ಕಾರ್ಯಕ್ರಮದಲ್ಲಿ ಹಿಂದಿಯ ಬಾರ್ ಬಾರ್ ದೇಖೋ ಸಿನಿಮಾದ ಕಾಲಾ ಚಸ್ಮಾ, ಖಳನಾಯಕ್ ಚಿತ್ರದ ಚೋಲಿ ಕೆ ಪೀಚೆ, ಫ್ರಾಡ್ ಸೈಯ್ನಾ ಚಿತ್ರದ ಚಮ್ಮಾ ಚಮ್ಮಾ, ಆರ್.ರಾಜ್‍ಕುಮಾರ್ ಚಿತ್ರದ ಗಂಧೀ ಬಾತ್ ಹಾಡುಗಳನ್ನುಪ್ರಸಾರ ಮಾಡಲಾಗಿದ್ದು, ಇದರಿಂದ ಕಾಪಿರೈಟ್ಸ್ ಉಲ್ಲಂಘನೆ ಆಗಿತ್ತು.

ಈ ಸಂಬಂಧ ಕಾನೂನು ಕ್ರಮಕೈಗೊಳ್ಳುವಂತೆ ಸಂತೋಷ್ ಎಂಬವರು ನೀಡಿದ ದೂರಿನ್ವಯ ಇಂದಿರಾ ನಗರ ಕ್ಲಬ್ ಅಧ್ಯಕ್ಷ ಬಿಎನ್‍ಎಸ್ ರೆಡ್ಡಿ, ಕಾರ್ಯದರ್ಶಿ ನಾಗೇಂದ್ರ, ಜನರಲ್ ಮ್ಯಾನೆಜರ್ ಶಾಮ್ ಸುಂದರ್ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಹಾಡುಗಳನ್ನು ಯಾವುದೇ ಆಡಿಯೊ, ಸಭೆ ಸಮಾರಂಭ, ರೆಸ್ಟೋರೆಂಟ್, ಕ್ಲಬ್, ಡಿಸ್ಕೋಥೆಕ್, ಇವೆಂಟ್, ಜಾಕಿ ಮಾಲ್‍ಗಳಲ್ಲಿ ಹಾಡುವ ಅಥವಾ ಪ್ರಸಾರ ಮಾಡುವ ಅಧಿಕೃತ ಹಕ್ಕನ್ನು ಈರೋಸ್, ಜೀ ಎಂಟರ್ ಟ್ರೈನ್‍ಮೆಂಟ್, ಟಿಪ್ಸ್ ಕಂಪೆನಿಯಿಂದ ನೋವೆಕ್ಸ್ ಕಮ್ಯೂನಿಕೇಷನ್ಸ್ ಕಂಪೆನಿ ಪಡೆದಿದೆ.

Similar News