×
Ad

ಕೊಣಾಜೆ: ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

Update: 2023-02-20 18:31 IST

ಕೊಣಾಜೆ: ಹರೇಕಳ ಸಮೀಪದ ದೇರಡ್ಕ ಎಂಬಲ್ಲಿ  ಮನೆಯೊಂದರಲ್ಲಿ ಒಂಟಿ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ  ಪತ್ತೆಯಾಗಿದೆ. ಹರೇಕಳ ದೇರಡ್ಕ ನಿವಾಸಿ ಜೀನಿ ಡಿಸೋಜ ಎಂಬವರ ಪತ್ನಿ  ಮಗ್ಗಿ ಮೊಂತೇರೊ (62) ಎಂಬವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಫೆ.16ರಂದು ಪುತ್ರಿ ಮನೆಗೆ ಬಂದು ತಾಯಿ ಜತೆಗೆ ಮಾತನಾಡಿ ತೆರಳಿದ್ದರು. ಆನಂತರ ಮೂರು ದಿನಗಳಿಂದ ಮೊಬೈಲ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಪುತ್ರಿ ಮನೆಗೆ ಬಂದಾಗ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಅಡುಗೆ ಕೋಣೆಯಲ್ಲಿ ಮೃತದೇಹ ಬಿದ್ದ ಸ್ಥಿತಿಯಲ್ಲಿದೆ. ಅಸೌಖ್ಯದಿಂದ ಬಿದ್ದು ತಲೆಗೆ ಗಾಯವಾಗಿ ಸಾವನ್ನಪ್ಪಿರುವ ಶಂಕೆಯನ್ನು ಕೊಣಾಜೆ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಅವರು ಮನೆಯಲ್ಲಿ ಒಂಟಿಯಾಗಿಯೇ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕಾಗಮಿಸಿದ ಕೊಣಾಜೆ ಪೊಲೀಸರು  ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

Similar News