ನನ್ನ ಪಾಲಿಗೆ ಅತ್ಯಂತ ಸ್ಮರಣೀಯ ದಿನ: ಶಾಸಕರ ಜೊತೆಗಿನ ಗ್ರೂಪ್ ಫೋಟೋ ಹಂಚಿಕೊಂಡ ಸಿಎಂ ಬೊಮ್ಮಾಯಿ
ಬೆಂಗಳೂರು, ಫೆ.20: ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು (ಸೋಮವಾರ) ವಿಧಾನಸೌಧದ ಆವರಣದಲ್ಲಿ ಶಾಸಕರ ಗ್ರೂಪ್ ಫೋಟೋ ಶೂಟ್ ನಡೆಯಿತು.
ಈ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ , ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರು ಭಾಗಿಯಾಗಿದರು.
ಈ ಸಂಬಂಧ ಟ್ವಿಟರ್ ನಲ್ಲಿ ಫೋಟೊ ಹಂಚಿಕೊಂಡಿರುವ ಸಿಎಂ ಬೊಮ್ಮಾಯಿ, "15ನೇ ವಿಧಾನಸಭೆಯ" ವಿಧಾನಸಭಾ ಸದಸ್ಯರ ಗ್ರೂಪ್ ಫೋಟೋ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. ಈ ವಿಧಾನಸಭೆಯ ಅವಧಿ ನನ್ನ ಪಾಲಿಗೆ ಅತ್ಯಂತ ಸ್ಮರಣೀಯವಾಗಿದ್ದು, ಈ ಅವಧಿಯಲ್ಲಿ ನಾನು ಶಾಸಕನಾಗಿ, ರಾಜ್ಯದ ಗೃಹ ಸಚಿವನಾಗಿ, ಬಳಿಕ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಎಲ್ಲ ಶಾಸಕ ಮಿತ್ರರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
"15ನೇ ವಿಧಾನಸಭೆಯ" ವಿಧಾನಸಭಾ ಸದಸ್ಯರ ಗ್ರೂಪ್ ಫೋಟೋ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. ಈ ವಿಧಾನಸಭೆಯ ಅವಧಿ ನನ್ನ ಪಾಲಿಗೆ ಅತ್ಯಂತ ಸ್ಮರಣೀಯವಾಗಿದ್ದು, ಈ ಅವಧಿಯಲ್ಲಿ ನಾನು ಶಾಸಕನಾಗಿ, ರಾಜ್ಯದ ಗೃಹ ಸಚಿವನಾಗಿ, ಬಳಿಕ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಎಲ್ಲ ಶಾಸಕ ಮಿತ್ರರಿಗೆ ಧನ್ಯವಾದಗಳು. pic.twitter.com/00Rj7RpA3f
— Basavaraj S Bommai (@BSBommai) February 20, 2023