ಮೊರ್ಬಿ ತೂಗು ಸೇತುವೆ ಕುಸಿತ : ಮುಖ್ಯ ಕೇಬಲ್ ವಯರ್‌ಗಳಿಗೆ ಅರ್ಧದಷ್ಟು ತುಕ್ಕು ಹಿಡಿದಿತ್ತು; ಸಿಟ್ ವರದಿ

Update: 2023-02-20 18:34 GMT

ಗಾಂಧಿನಗರ (ಗುಜರಾತ್) , ಫೆ. 20: ಅಕ್ಟೋಬರ್‌ನಲ್ಲಿ ಕುಸಿಯುವ ಸಂದರ್ಭ ಮೊರ್ಬಿ ತೂಗು ಸೇತುವೆಯ ಎರಡು ಮುಖ್ಯ ಕೇಬಲ್‌ಗಳ ವಯರ್‌ಗಳಿಗೆ ಸುಮಾರು ಅರ್ಧದಷ್ಟು ತುಕ್ಕು ಹಿಡಿದಿತ್ತು ಎಂದು ವಿಶೇಷ ತನಿಖಾ ತಂಡ ತನ್ನ ಮಧ್ಯಂತರ ವರದಿಯಲ್ಲಿ ಹೇಳಿದೆ. 

ಈ ವರದಿಯನ್ನು ಐವರು ಸದಸ್ಯರ ವಿಶೇಷ ತನಿಖಾ ತಂಡ 2022 ಡಿಸೆಂಬರ್‌ನಲ್ಲಿ ಗುಜರಾತ್ ಸರಕಾರಕ್ಕೆ ಸಲ್ಲಿಸಿತ್ತು. ಈ ವರದಿಯನ್ನು ಮೊರ್ಬಿ ಪೌರಾಡಳಿತ ಇತ್ತೀಚೆಗೆ ಬಿಡುಗಡೆ ಮಾಡಿದೆ.  

ಗಡಿಯಾರ ಹಾಗೂ ಇಲಕ್ಟ್ರಿಕ್ ಉತ್ಪನ್ನಗಳ ಉತ್ಪಾದನೆಯಲ್ಲಿ ಜನಪ್ರಿಯವಾಗಿರುವ ಒರೆವಾ ಸಮೂಹಕ್ಕೆ ಶತಮಾನದ ಹಳೆಯ ಕಾಲದ ಸೇತುವೆಯ ನವೀಕರಣದ ಗುತ್ತಿಗೆಯನ್ನು ಟೆಂಡರ್ ಕರೆಯದೆ  ಯಾಕೆ ನೀಡಲಾಯಿತು ಎಂದು ವಿವರಿಸುವಂತೆ ಗುಜರಾತ್ ಉಚ್ಚ ನ್ಯಾಯಾಲಯ ರಾಜ್ಯ ಸರಕಾರವನ್ನು ನವೆಂಬರ್ 15ರಂದು ಪ್ರಶ್ನಿಸಿತ್ತು. ಈ ವಿಷಯದ ಕುರಿತು ಸಲ್ಲಿಸಲಾದ  ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ಉಚ್ಚ ನ್ಯಾಯಾಲಯ ಗುಜರಾತ್ ಸರಕಾರದಲ್ಲಿ ಈ ಪ್ರಶ್ನೆ ಕೇಳಿತ್ತು.

Similar News