ಜಾನಪದ ಕಲಾವಿದ ಎಚ್. ಕೃಷ್ಣಯ್ಯ ಲಾಯಿಲ ನಿಧನ
Update: 2023-02-21 11:06 IST
ಬೆಳ್ತಂಗಡಿ: ಜಾನಪದ ಕಲಾವಿದ ಬಹುಮುಖ ಪ್ರತಿಭೆ ಲಾಯಿಲ ಗ್ರಾಮದ ಎಚ್. ಕೃಷ್ಣಯ್ಯ ಅವರು ಫೆ 20ರಂದು ಸಂಜೆ ತನ್ನ ಮನೆಯಲ್ಲಿ ನಿಧನರಾಗಿದ್ದಾರೆ.
ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಲಾಯಿಲ ಗ್ರಾಮದ ಉತ್ಸಾಹಿ ಯುವಕ ಮಂಡಲವನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಇವರು, ಆಕಾಶವಾಣಿ, ದೂರದರ್ಶನದಲ್ಲೂ ಹಲವಾರೂ ಕಾರ್ಯಕ್ರಮ ನೀಡುತಿದ್ದರು. ಜನಪದ ಎಲ್ಲಾ ಕಲಾ ಪ್ರಕಾರಗಳು , ಲಾವಣಿ, ರಂಗಗೀತೆ , ಭಾವಗೀತೆ , ಭಕ್ತಿಗೀತೆ , ಹೋರಾಟದ ಹಾಡುಗಳನ್ನು ಹಾಡುತ್ತಿದ್ದರು. ಶಾಲಾ ದಿನಗಳಲ್ಲಿ ರೆಡಿಯೋ ಮೂಲಕ ಹಾಡುಗಳನ್ನು ಕಲಿತ ಇವರು ರಾಜ್ಯ ಮಟ್ಟದ ಕಲಾವಿದರಾಗಿ ಗುರುತಿಸಿಕೊಂಡಿದ್ದರು.
ಇವರಿಗೆ ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಗಳು ಸೇರಿದಂತೆ ಹಲವಾರು ಸಂಘಸಂಸ್ಥೆಗಳು ಸನ್ಮಾನಿಸಿದೆ. ಇವರ ನಿಧನಕ್ಕೆ ಹಲವಾರು ಮಂದಿ ಸಂತಾಪ ಸೂಚಿಸಿದ್ದು, ಮಂಗಳವಾರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.