ಕೆರೆಗಳ ಮೀನು ಹಿಡಿಯಲು ಪರವಾನಿಗೆ ನೀಡಲು ಶೀಘ್ರ ಕ್ರಮ: ಸಚಿವ ಎಸ್.ಅಂಗಾರ

Update: 2023-02-22 16:11 GMT

ಬೆಂಗಳೂರು, ಫೆ.22: ರಾಜ್ಯದಲ್ಲಿ ಒಳನಾಡು ಮೀನುಗಾರಿಕೆ ಕಾರ್ಯ ನೀತಿ ಜಾರಿಯಲ್ಲಿದ್ದು, ಇದರಡಿ ಆಸಕ್ತ ಮೀನುಗಾರ ಸಹಕಾರ ಸಂಘಗಳಿಂದ ಅರ್ಜಿ ಆಹ್ವಾನಿಸಿ ಗುತ್ತಿಗೆ ಪ್ರಕ್ರಿಯೆಯನ್ನು ಕೆರೆಗಳ ಮೀನು ಹಿಡಿಯಲು ಪರವಾನಿಗೆ ನೀಡುವ ಪ್ರಕ್ರಿಯೆ ಮೇ ತಿಂಗಳಿನಿಂದ ಆರಂಭವಾಗಲಿದೆ ಎಂದು ಮೀನುಗಾರಿಕಾ ಸಚಿವ ಎಸ್.ಅಂಗಾರ ಹೇಳಿದ್ದಾರೆ.

ಬುಧವಾರ ಪರಿಷತ್ತಿನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಎಂ.ನಾಗರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಮೀನುಗಾರಿಕೆಗೆ ಬಳಕೆಯಾಗುವ 3910 ದೊಡ್ಡ ಕೆರೆಗಳು ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 23,767 ಸಣ್ಣ ಕೆರೆಗಳು ಇವೆ ಎಂದು ತಿಳಿಸಿದರು.

ಶೇ..50ಕ್ಕಿಂತ ಹೆಚ್ಚು ನೀರು ಇರುವ ಕೆರೆಗಳಿಗೆ ಮೀನು ಸಾಕಾಣಿಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಶೇ. 50ಕ್ಕಿಂತ ಕಡಿಮೆ ನೀರು ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡುವ ಕುರಿತು ಜಿಲ್ಲಾ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳುವ ಅವಕಾಶ ಮಾಡಿಕೊಡಲಾಗಿದೆ. ಇನ್ನೂ, ಮೀನುಗಾರಿಕೆ ಇಲಾಖೆಯಲ್ಲಿ ಉತ್ತಮ ಆಡಳಿತಕ್ಕಾಗಿ ಇ-ಆಡಳಿತ ಸೇರಿದಂತೆ ನೂತನ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ ಫಲಾನುಭವಿಗಳಿಗೆ ದೊರೆಯಬಹುದಾದ ಸಹಾಯಧನವನ್ನು ನೇರವಾಗಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. 

Similar News