ಡಾ.ಮಿತ್ರಾ ಎನ್ ಹೆಗ್ಡೆರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ
ಮಂಗಳೂರು, ಫೆ.22: ಇಂಡಿಯನ್ ಸೊಸೈಟಿ ಫಾರ್ ಡೆಂಟಲ್ ರಿಸರ್ಚ್ (ಐಎಸ್‌ಡಿಆರ್) ಮತ್ತು ಇಂಟರ್‌ನ್ಯಾಶನಲ್ ಅಸೋಸಿಯೇಷನ್ ಫಾರ್ ಡೆಂಟಲ್ ರಿಸರ್ಚ್ (ಐಎಡಿಆರ್) ನಿಂದ ನೀಡಲಾಗುವ ಐಎಸ್‌ಡಿಆರ್ ಸಂಸ್ಥಾಪಕ ಅಧ್ಯಕ್ಷ - ಪ್ರೊ. ಎಂ. ರಹಮತುಲ್ಲಾ ಪ್ರಶಸ್ತಿಗೆ ಡಾ. ಮಿತ್ರಾ ಎನ್ ಹೆಗ್ಡೆ ಅವರು ಭಾಜನರಾಗಿದ್ದಾರೆ.
ಸಮಾಜದ ಅತ್ಯುನ್ನತ ಪ್ರಶಸ್ತಿಯನ್ನು ಫೆ. 18ರಂದು ಹೊಸದಿಲ್ಲಿಯಲ್ಲಿ ನಡೆದ ಐಎಸ್‌ಡಿಆರ್ ನ 33 ನೇ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಡಾ ಮಿತ್ರಾ ಎನ್ ಹೆಗ್ಡೆ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀತಿ ಆಯೋಗ್ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ) ಸದಸ್ಯ ಡಾ ವಿನೋದ್ ಕುಮಾರ್ ಪ್ರದಾನ ಮಾಡಿದರು.
ಟ್ರಿನಿಟಿ ಕಾಲೇಜು ಆರೋಗ್ಯವಿಜ್ಞಾನ ವಿಭಾಗದ ಡೀನ್ ಡಾ ಬ್ರೈನ್ ಒ’ಕಾನ್ನೆಲ್, ಹೊಸದಿಲ್ಲಿಯ ಇಂಡಿಯನ್ ಅಸೋಸಿಯೇಷನ್ ಆಫ್ ಡೆಂಟಲ್ ರಿಸರ್ಚ್ ಅಧ್ಯಕ್ಷ ಡಾ ಮಹೇಶ್ ವರ್ಮಾ ಉಪಸ್ಥಿತರಿದ್ದರು.
ಎಬಿ ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್‌ಆಫ್ ಡೆಂಟಲ್ ಸಯನ್ಸ್‌ನ ಉಪ ಪ್ರಾಂಶುಪಾಲರಾಗಿರುವ ಡಾ. ಮಿತ್ರಾ ಹೆಗ್ಡೆ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸೂಚ್ಯಂಕ ನಿಯತ ಕಾಲಿಕಗಳಲ್ಲಿ 391 ಪ್ರಕಟನೆಗಳೊಂದಿಗೆ, 30 ವರ್ಷಗಳ ಬೋಧನಾ ಅನುಭವದೊಂದಿಗೆ,62 ಮಂದಿಗೆ ಮಾರ್ಗದರ್ಶನ ಮತ್ತು 128 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಹ ಮಾರ್ಗದರ್ಶನ ನೀಡಿದ್ದಾರೆ.
ಮಿತ್ರಾ ಎನ್ ಹೆಗ್ಡೆ 5 ಅಭ್ಯರ್ಥಿಗಳಿಗೆ ಮಾನ್ಯತೆ ಪಡೆದ ಪಿಎಚ್‌ಡಿ ಮಾರ್ಗದರ್ಶನ ನೀಡಿದ್ದಾರೆ. ಅವರು 5 ಪ್ರಮುಖ ಬಾಹ್ಯಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.