×
Ad

ಮುಸ್ಲಿಮರ ಹೆಸರು ಬಿಟ್ಟು ಮತದಾರರ ಪಟ್ಟಿ ಪ್ರಕಟ: ಮರು ನೋಂದಣಿಗೆ ಅವಕಾಶ ಕೋರಿ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ

Update: 2023-02-23 21:46 IST

ಬೆಂಗಳೂರು, ಫೆ. 23: ತಾಂತ್ರಿಕ ದೋಷದಿಂದಾಗಿ 2023ರ ಮತದಾರರ ಪಟ್ಟಿಯಲ್ಲಿ ಮುಸ್ಲಿಮರ ಹೆಸರುಗಳು ಬಿಟ್ಟು ಹೋಗಿದ್ದು, ಬಿಟ್ಟು ಹೋದ ಹೆಸರುಗಳನ್ನು ಮತದಾರರ ಪಟ್ಟಗೆ ಸೇರ್ಪಡೆ ಮಾಡಲು ವಿಶೇಷ ನೋಂದಣಿ ಪ್ರಕ್ರಿಯೆಯನ್ನು ರಾಜ್ಯಾದ್ಯಂತ ಆರಂಭಿಸಬೇಕು ಎಂದು ಫೋರಂ ಫಾರ್ ಮೈನಾರಿಟೀಸ್ ರೈಟ್ಸ್, ಡೆಮೊಕ್ರಾಟಿಕ್ ಮತ್ತು ಪೊಲೀಟಿಕಲ್ ಎಂಪಾರ್‍ಮೆಂಟ್ ಒತ್ತಾಯಿಸಿದೆ. 

ಗುರುವಾರ ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ವೇದಿಕೆಯ ಸಂಚಾಲಕ ಎಸ್.ಆರ್. ಮೆಹ್ರೋಝ್ ಖಾನ್ ಪ್ರತವನ್ನು ಸಲ್ಲಿಸಿದ್ದು, ‘2018, 2022 ಮತ್ತು 2023ರ ಮತದಾರರ ಪಟ್ಟಿಯನ್ನು ನಮ್ಮ ತಂಡ ಪರಿಶೀಲಿಸಿದೆ. 2023ರ ಮತದಾರರ ಪಟ್ಟಿಯಲ್ಲಿ ಮುಸ್ಲಿಮರ ಹೆಸರುಗಳು ಬಿಟ್ಟು ಹೋಗಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

2022ರ ಅಕ್ಟೋಬರ್ ತಿಂಗಳಿನ ವರೆಗೂ ನೋಂದಣಿದಾರರು ಒಂದೇ ಲಾಗಿನ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ತಿಳಿಸಲಾಗಿತ್ತು. ಬಡ ಮತ್ತು ಅವಿದ್ಯಾವಂತಂರು ಅಂತರ್ಜಾಲವನ್ನು ಬಳಸಿಕೊಳ್ಳಲು ಸಾಧ್ಯವಾಗದ ಕಾರಣ ಮತದಾರರ ಪಟ್ಟಿಗೆ ನೋಂದಣಿ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ. 

ಮುಸ್ಲಿಮರ ಅಸಂಖ್ಯಾತ ಹೆಸರುಗಳು ಮತದಾರರ ಪಟ್ಟಿಯಿಂದ ಬಿಟ್ಟುಹೋಗಿರುವ ಕಾರಣ ಅವರು, ತಮ್ಮ ಸಂವಿಧಾನತ್ಮಕವಾದ ಹಕ್ಕನ್ನು ಚಲಾಯಿಸಲು ಮತ್ತು ಕರ್ತವ್ಯವನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ತಮ್ಮ ಮತದಾನವನ್ನು ಚಲಾಯಿಸಲು ಪಟ್ಟಿಯಲ್ಲಿ ಬಿಟ್ಟು ಹೋದ ಹೆಸರುಗಳನ್ನು ಮರು ಸೇರ್ಪಡೆ ಮಾಡುವ ಉದ್ದೇಶದಿಂದ ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.   

Similar News