ಬೆಂಗಳೂರು: ನಿರ್ಮಾಣ ಹಂತದ ಕಟ್ಟಡಕ್ಕೆ ಲಿಫ್ಟ್ ಅಳವಡಿಸಲು ತೋಡಿದ್ದ ಗುಂಡಿಗೆ ಬಿದ್ದು ಮಗು ಮೃತ್ಯು
Update: 2023-02-25 13:09 IST
ಬೆಂಗಳೂರು, ಫೆ.25: ನಿರ್ಮಾಣ ಹಂತದ ಕಟ್ಟಡ ಸಂಕೀರ್ಣದ ಲಿಫ್ಟ್ ಗುಂಡಿಗೆ ಬಿದ್ದು ಆರು ವರ್ಷದ ಮಗುವೊಂದು ಮೃತಪಟ್ಟ ಘಟನೆ ನಗರದ ಸುಲ್ತಾನ್ ಪೇಟೆ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಅದೇ ಕಟ್ಟಡದ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕ ದಂಪತಿಯ ಪುತ್ರಿ ಮಹೇಶ್ವರಿ(6) ಮೃತಪಟ್ಟ ಬಾಲಕಿ. ಐದು ಅಂತಸ್ತಿನ ಕಟ್ಟಡ ಸಂಕೀರ್ಣ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ ಲಿಫ್ಟ್ ಅಳವಡಿಸಲು ಆಳವಾದ ಗುಂಡಿ ತೋಡಲಾಗಿದೆ. ಅದರಲ್ಲಿ ನೀರು ನಿಂತಿದ್ದು, ಕಳೆದ ರಾತ್ರಿ ಅತ್ತ ತೆರಳಿದ ಮಗು ಆಕಸ್ಮಿಕವಾಗಿ ಈ ಗುಂಡಿಗೆ ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ. ಇಂದು ಬೆಳಗ್ಗೆ ಮಗುವಿನ ಮೃತದೇಹ ಗುಂಡಿಯಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ.
ಈ ಬಗ್ಗೆ ಕೆ.ಆರ್. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.