ಅಝೀಂ ಪ್ರೇಮ್ ಜಿ ವಿವಿಯಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿ ಮೃತ್ಯು: ಎಸ್ಎಫ್ಐ ಆರೋಪ

ಆರೋಪ ನಿರಾಕರಿಸಿದ ಆಡಳಿತ ಮಂಡಳಿ

Update: 2023-02-25 12:08 GMT

ಬೆಂಗಳೂರು, ಫೆ.25: ಅಝೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆಯ ವೇಳೆ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಪ್ರಥಮ ವರ್ಷದ ಎಂಎ ಡೆವಲಪ್ಮೆಂಟ್ ವಿಭಾಗದ ವಿದ್ಯಾರ್ಥಿ ಅಭಿಜಿತ್ ಶಿಂಧೆ ಸಾವಿಗೆ ಅಝೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿ ಮತ್ತು  ನಿರ್ಲಕ್ಷ್ಯವೇ  ನೇರ ಕಾರಣ ಎಂದು ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ) ಆರೋಪಿಸಿದೆ.

ಬೆಂಗಳೂರಿನಲ್ಲಿರುವ ಅಝೀಂ ಪ್ರೇಮ್ ಜಿ ವಿವಿಯ ಆಡಳಿತ ಮಂಡಳಿ ವಿರುದ್ಧ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ 12 ದಿನಗಳಿಂದ ವಿದ್ಯಾರ್ಥಿಗಳು ವಿವಿ ಆವರಣದಲ್ಲಿ ಹೋರಾಟ ನಡೆಸುತ್ತಿದ್ದರು. 

ಆಡಳಿತ ಮಂಡಳಿ ಸ್ಪಷ್ಟನೆ:

'ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಮೃತಪಟ್ಟಿರುವುದು ದುರದೃಷ್ಟಕರ ಸಂಗತಿ. ಆದರೆ, ವಿದ್ಯಾರ್ಥಿ ಅಭಿಜಿತ್ ಉಪವಾಸ ಸತ್ಯಗ್ರಹ ವೇಳೆ ಮೃತಪಟ್ಟಿರುವ ಆರೋಪ ಸುಳ್ಳು. ಶುಕ್ರವಾರ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದ  ವೇಳೆ ಕುಸಿದುಬಿದ್ದು ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ' ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

Similar News