ಬೆಂಗಳೂರು: ಅನಧಿಕೃತ ಲೈವ್‍ಬ್ಯಾಂಡ್, ಕ್ಯಾಸಿನೊಗಳನ್ನು ಮುಚ್ಚುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳಿಂದ ಧರಣಿ
ಬೆಂಗಳೂರು, ಫೆ.25: ನಗರದಲ್ಲಿ ಅನಧಿಕೃತ ನಡೆಸಲಾಗುತ್ತಿರುವ ಲೈವ್‍ಬ್ಯಾಂಡ್, ಪಬ್ಬು, ಬಾರ್ ಹಾಗೂ ಕ್ಯಾಸಿನೋಗಳ ಮೇಲೆ ಸೂಕ್ತ ಕ್ರಮವನ್ನು ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಇಲ್ಲಿನ ಫ್ರಿಡಂ ಪಾರ್ಕ್‍ನಲ್ಲಿ ಧರಣಿ ನಡೆಸಿದವು.
ಶನಿವಾರ ನಗರದಲ್ಲಿ ಸುಮಾರು 50 ಅನಧಿಕೃತ ಲೈವ್‍ಬ್ಯಾಂಡ್, ಪಬ್ಬು, ಬಾರ್ ಹಾಗೂ ಕ್ಯಾಸಿನೋಗಳಿವೆ. ಹೆಣ್ಣು ಮಕ್ಕಳ ಕಷ್ಟ ಮತ್ತು ಬಡತನವನ್ನು ದುರುಪಯೋಗಪಡಿಸಿಕೊಂಡು, ರಾಜ್ಯದ ಹಾಗೂ ಹೊರರಾಜ್ಯದ ಹೆಣ್ಣು ಮಕ್ಕಳನ್ನು ಲೈವ್ ಬ್ಯಾಂಡ್‍ಗಳಲ್ಲಿ ಕೆಲಸ ನಿರ್ವಹಿಸುವಂತೆ ಒತ್ತಾಯಿಸಲಾಗುತ್ತಿದೆ. ಆದರೆ ಈ ಹೆಣ್ಣು ಮಕ್ಕಳಿಗೆ ಯಾವುದೇ ಭದ್ರತೆಯನ್ನು ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತೆರಿಯನ್ನು ಕಟ್ಟದೆ ನಡೆಯುವ ಪುಟ್ಟ ಅಂಗಡಿಗಳ ವಿರುದ್ಧ ಇಲಾಖೆಗಳು ಕೂಡಲೇ ಕ್ರಮವನ್ನು ಜರುಗಿಸುತ್ತವೆ. ಆದರೆ ಯಾವುಗಲೂ ಅವ್ಯವಹಾರವನ್ನು ನಡೆಸುವ ದೊಡ್ಡ ಬಾರ್, ಪಬ್ಬು ಹಾಗೂ ಲೈವ್ ಬ್ಯಾಂಡ್‍ಗಳ ವಿರುದ್ಧ ಯಾವುದೇ ಕ್ರಮವನ್ನು ಜರಿಸಗಿಸುತ್ತಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಕಾನೂನುಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ನಡೆಸಲಾಗುತ್ತಿರುವ ಬಾರ್, ಪಬ್ಬು ಹಾಗೂ ಲೈವ್ ಬ್ಯಾಂಡ್‍ಗಳ ವಿರುದ್ಧ ಸೂಕ್ತ ಕ್ರಮ ಜರಿಗಿಸುವಂತೆ ರಾಜ್ಯದ ಗೃಹಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ಗೃಹಮಂತ್ರಿಗಳು ಯಾವುದೇ ಕ್ರಮವನ್ನು ಜರುಗಿಸಿಲ್ಲ. ಹಾಗಾಗಿ ಧರಣಿ ನಡೆಲಾಗುತ್ತಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಸಾರ್ವಜನಿಕ ಹಿತಾಸಕ್ತ ಅರ್ಜಿಯನ್ನು ಹಾಕಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.