ಆರ್ಯಾಪು ಗ್ರಾಪಂ ಉಪ ಚುನಾವಣೆ: ಶೇ.76.70 ಮತದಾನ
Update: 2023-02-25 19:47 IST
ಪುತ್ತೂರು: ಸದಸ್ಯರೊಬ್ನರ ನಿಧನದ ಹಿನ್ನಲೆಯಲ್ಲಿ ತೆರವಾಗಿದ್ದ ಆರ್ಯಾಪು ಗ್ರಾಪಂನ ವಾರ್ಡ್ 1 ಕ್ಕೆ ಇಂದು ನಡೆದ ಉಪ ಚುನಾವಣೆಯಲ್ಲಿ ಶೇ.76.70 ಮತದಾನ ವಾಗಿದೆ.
ಈ ವಾರ್ಡ್ ನಲ್ಲಿ ಒಟ್ಟು 1090 ಮತದಾರರಿದ್ದಾರೆ. ಈ ಪೈಕಿ 403 ಪುರುಷರು ಹಾಗೂ 433 ಮಹಿಳೆಯರು ಸೇರಿದಂತೆ ಒಟ್ಟು 836 ಮಂದಿ ಮತ ಚಲಾಯಿಸಿದ್ದಾರೆ.
ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿರುವ ಇಲ್ಲಿ ಬಿಜೆಪಿ ಬೆಂಬಲಿತ ಯತೀಶ್ ಡಿ.ಬಿ ಮತ್ತು ಕಾಂಗ್ರೆಸ್ ಬೆಂಬಲಿತ ಪ್ರಜ್ವಲ್ ರೈ ತೊಟ್ಲ ಸ್ಪರ್ಧಾ ಕಣದಲ್ಲಿದ್ದು, ಇವರಿಬ್ನರ ನಡುವೆ ನೇರ ಹಣಾಹಣಿ ನಡೆಯಲಿದೆ.