×
Ad

ಬೆಂಗಳೂರು: ಗೃಹಣಿ ಆತ್ಮಹತ್ಯೆ

Update: 2023-02-25 20:17 IST

ಬೆಂಗಳೂರು, ಫೆ. 25: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜೈ ಮಾರುತಿ ನಗರದ ಕಾವ್ಯಾ(23) ಆತ್ಮಹತ್ಯೆ ಮಾಡಿಕೊಂಡಿರುವ ರ್ದುದೈವಿ ಎಂದು ಗುರುತಿಸಲಾಗಿದೆ. 9 ದಿನಗಳ ಹಿಂದೆ ಕಾವ್ಯಾ, ಜೈ ಮಾರುತಿ ನಗರಕ್ಕೆ ಬಂದು ನೆಲೆಸಿದ್ದರು. ಈಕೆ 8 ವರ್ಷಗಳ ಹಿಂದೆ ವೆಂಕಟೇಶ್ ಜೊತೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಮೂಲತಃ ಮೈಸೂರಿನವರಾದ ವೆಂಕಟೇಶ್ ಬಂಡೆ ಕೆಲಸ ಮಾಡುತ್ತಿದ್ದು ಮೂರು ದಿನಕ್ಕೊಮ್ಮೆ ಮನೆಗೆ ಹೋಗುತ್ತಿದ್ದು,ಇಂದು ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ನಿ ಕಾವ್ಯಾ ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News