ಮಂಗಳೂರು: ಬಸ್ ಸಿಬ್ಬಂದಿಗಳ ನಡುವೆ ಹೊಡೆದಾಟ; ಇಬ್ಬರ ಬಂಧನ
Update: 2023-02-25 20:28 IST
ಮಂಗಳೂರು : ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕನಗರದ ಶೇಡಿಗುರಿ ಬಸ್ ನಿಲ್ದಾಣದ ಮುಂದೆ ಎರಡು ಖಾಸಗಿ ಬಸ್ಸುಗಳ ಚಾಲಕ ಸಾಗರ್ ಮತ್ತು ನಿರ್ವಾಹಕ ಸುಧೀರ್ ಹಾಗೂ ಚಾಲಕ ವಿಘ್ನೇಶ್ ಮತ್ತು ನಿರ್ವಾಹಕ ಶ್ರೀಧರ್ ಎಂಬವರು ಶನಿವಾರ ಪಾಲನೆ ವಿಚಾರದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಹೊಡೆದಾಡಿಕೊಂಡಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗೂ ಪರಸ್ಪರ ಅಡ್ಡಾದಿಡ್ಡಿಯಾಗಿ ಬಸ್‌ಗಳನ್ನು ನಿಲ್ಲಿಸಿ ಪರಸ್ಪರ ಬೈದಾಡಿ, ತಳ್ಳಾಡುತ್ತಾ ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಬಸ್ಸುಗಳನ್ನು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿ ಕಾನೂನು ಕ್ರಮ ಜರಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.