×
Ad

ಉಪ್ಪಿನಂಗಡಿ: ಅರಣ್ಯ ಇಲಾಖೆ ನರ್ಸರಿಗೆ ಕಾಡಾನೆ ದಾಳಿ

Update: 2023-02-25 20:54 IST

ಉಪ್ಪಿನಂಗಡಿ: ಶಿರಾಡಿಯಲ್ಲಿ ಅರಣ್ಯ ಇಲಾಖೆಗೆ ಸೇರಿದ ನರ್ಸರಿಗೆ ಕಾಡಾನೆಗಳು ಲಗ್ಗೆಯಿಟ್ಟು, ಹಾನಿಗೊಳಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸನಿಹದಲ್ಲಿರುವ ನರ್ಸರಿಗೆ ಕಾಡಾನೆಗಳು ಲಗ್ಗೆಯಿಟ್ಟಿದ್ದರಿಂದ ತಡೆಬೇಲಿಗಳು ಮುರಿದು ಬಿದ್ದಿದ್ದು, ವಿವಿಧ ಜಾತಿಯ ನರ್ಸರಿ ಗಿಡಗಳು ಚೆಲ್ಲಾಪಿಲ್ಲಿಯಾಗಿವೆ. ಅಲ್ಲದೇ, ಪೈಪ್‍ಗಳಿಗೆ ಹಾನಿಯಾಗಿವೆ. ಈ ಸಂದರ್ಭ ನರ್ಸರಿಯಲ್ಲಿ ಕಾವಲುಗಾರ ಇರಲಿಲ್ಲ ಎಂದು ತಿಳಿದುಬಂದಿದೆ.

Similar News