×
Ad

ಕಂಕನಾಡಿ ಗರಡಿಯ 150ನೆ ವರ್ಷಾಚರಣೆ; ಮಾ.3ರಂದು ಹೊರೆಕಾಣಿಕೆ

Update: 2023-02-25 22:07 IST

ಮಂಗಳೂರು: ಕರಾವಳಿಯ ಪ್ರಧಾನ ಕ್ಷೇತ್ರಗಳಲ್ಲೊಂದಾದ ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಸ್ಥಾಪನೆಗೊಂಡು 150 ವರ್ಷಗಳ ಪೂರ್ಣಗೊಂಡಿರುವ ಅಂಗವಾಗಿ ಮಾ3ರಿಂದ ಮಾ.7ರವರೆಗೆ ಸಹಸ್ರ ನಾರಿಕೇಳ ಗಣಯಾಗ,ಸಹಸ್ರ ಕುಂಭಾಭೀ‌ಷೇಕ  ,ನಾಗ ಮಂಡಲೋತ್ಸವ ನಡೆಯಲಿದೆ ಎಂದು ಗರಡಿಯ ಅಧ್ಯಕ್ಷ ಕೆ ಚಿತ್ತರಂಜನ್  ತಿಳಿಸಿದ್ದಾರೆ.

ಕಂಕನಾಡಿ ಬ್ರಹ್ಮ ಬೈದರ್ಕಳ  ಗರಡಿಯ ಲ್ಲಿಂದು  ಅವರು ಸುದ್ದಿಗೋಷ್ಠಿ ಯನ್ನು ದ್ದೇಶಿಸಿ ಮಾತನಾಡುತ್ತಿದ್ದರು.
ಗರಡಿಯ ಪ್ರಧಾನ ಅರ್ಚಕ ರಾದ ಕೆ. ವಾಸುದೇವ ಶಾಂತಿಯವರ ಮಾರ್ಗದರ್ಶನದಲ್ಲಿ ಶ್ರೀ ನಾರಾಯಣ ಗುರು ವೈದಿಕ ಸಮಿತಿ, ಮಂಗಳೂರು ಇವರ ಸಹಭಾಗಿತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಮಾ.3ರಂದು ಮರೋಳಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ಶ್ರೀಮಚ್ಚೇಂದ್ರನಾಥ  ಬಾಬಾ ಇವರ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶ್ರೀ ಕ್ಷೇತ್ರದಿಂದ ಕಂಕನಾಡಿ ಶ್ರೀ ಬ್ರಹ ಬೈದರ್ಕಳ ಗರಡಿ ಕ್ಷೇತ್ರಕ್ಕೆ ಅವರ  ಆಗಮನ, ಬೆಳಗ್ಗೆ 9.12ಕ್ಕೆ ತೋರಣ ಮುಹೂರ್ತ, 9.30ಕ್ಕೆ ಕೊಪ್ಪರಿಗೆ ಮುಹೂರ್ತ, 11.08ಕ್ಕೆ ಉಗ್ರಾಣ ಮುಹೂರ್ತ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ: ರಾತ್ರಿ ಗಂಟೆ 7.30ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ಕಾರ್ಯಕ್ರಮ, ಹಾಗೂ ನಾದ ಸಂಕೀರ್ತನ ಮಂಗಳೂರು ತಂಡದಿಂದ ಭಕ್ತಿ ಲಹರಿ ನಡೆಯಲಿದೆ.

ಮಾ.4ರಂದು  ನಾರಿಕೇಳ, ಗಣಯಾಗ, ಪೂರ್ವಾಹ್ನ ಗಂಟೆ 11.00ಕ್ಕೆ ಪೂರ್ಣಾಹುತಿ, ಮಧ್ಯಾಹ್ನ 12.00 ಗಂಟೆಗೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ, ಸಾಂಸ್ಕೃತಿಕ ಸಂಜೆ 4.30ರಿಂದ ಮಂಗಳೂರಿನ ಭಕ್ತಿ ರಸಮಂಜರಿ ಕಾರ್ಯಕ್ರಮ, ರಾತ್ರಿ ಗಂಟೆ 8.00ರಿಂದ ರುದ್ರ ಥಿಯೇಟರ್  ಮಗಳೂರು ಅರ್ಪಿಸುವ ಶೂದ್ರ ಶಿವ ನಾಟಕ ಪ್ರದರ್ಶನ ನಡೆಯಲಿದೆ.

ಮಾ.5ರಂದು ಬೆಳಗ್ಗೆ 7.00ದಿಂದ ಕ್ಷೇತ್ರದ ಪರಿವಾರ ದೈವದೇವರುಗಳಿಗೆ ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ 4.30ರಿಂದ ಯುವವಾಹಿನಿ ಶಕ್ತಿನಗರ: ಘಟಕದ ತಂಡದಿಂದ ನೃತ್ಯ ತಾಂಡವ ವೈವಿಧ್ಯಮಯ ಕಾರ್ಯಕ್ರಮ, ರಾತ್ರಿ ಗಂಟೆ 8.30ರಿಂದ ಸೌರಭ ಕಲಾ ಪರಿಷತ್‌ ಮಂಗಳೂರು ಇವರ ವಿದೂಷಿ ಡಾ.ವಿದ್ಯಾ ಮುರಳೀಧರ್‌ ಶಿಷ್ಯ ವೃಂದದವರಿಂದ ಭರತ ನೃತ್ಯ ಶತಾವಳಿ ಮತ್ತು ಪೃಥ್ವಿ ನೃತ್ಯರೂಪಕ ಪ್ರದರ್ಶನ ನಡೆಯಲಿದೆ.
ಮಾ.6ರಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮಾ.7ರಂದು ಗಣಹೋಮ, ನಾಗದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ತನುತಂಬಿಲ ಸೇವೆ, ಆಶ್ಲೇಷ ಬಲಿ, ಮಂಡಲ ಪೂಜೆ, ರಾತ್ರಿ ಗಂಟೆ 9ಕ್ಕೆ ನಾಗಪಾತ್ರಿ ಶ್ರೀ ಮನೋಜ್ ಶಾಂತಿ ಮತ್ತು ಬಳಗದವರಿಂದ ನಾಗ, ಸಾನಿಧ್ಯ ದಲ್ಲಿ 'ಹಾಲಿಟ್ಟು ಸೇವೆ, ರಾತ್ರಿ ಗಂಟೆ 12.00ರಿಂದ ನಾಗ ಮಂಡಲೋತ್ಸವ ನಡೆಯಲಿದೆ ಎಂದು ಚಿತ್ತರಂಜನ್ ತಿಳಿಸಿದ್ದಾರೆ.

ಹೊರೆಕಾಣಿಕೆ ಮೆರವಣಿಗೆ:-ಮಾ.3ರಂದು

ಮಧ್ಯಾಹ್ನ 5 ಗಂಟೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಿಂದ ಹೊರಟು ಶ್ರೀ ನಾರಾಯಣಗುರು ವೃತ್ತ ಲಾಲ್ ಭಾಗ್,ಪಿ.ವಿ.ಎಸ್‌ ವೃತ್ತ, ಬಂಟ್ಸ್ ಹಾಸ್ಟೆಲ್ ವೃತ್ತ, ಜೋತಿ ವೃತ್ತ, ಕಂಕನಾಡಿ, ಪಂಪ್‌ ವೆಲ್ ವೃತ್ತದ ಮೂಲಕ ಶ್ರೀ ಕ್ಷೇತ್ರ ಗರಡಿಗೆ ಆಗಮಿಸಲಿದೆ ಎಂದವರು ತಿಳಿಸಿದ್ದಾರೆ‌

*ಕಂಕನಾಡಿ ಗರಡಿ ಕ್ಷೇತ್ರಕ್ಕೆ ಸಿಎಂ ಆಗಮನ:-

ಮಾ.7ರಂದು ಕಂಕನಾಡಿ ಗರಡಿ ಕ್ಷೇತ್ರದಲ್ಲಿ ನಡೆಯುವ ನಾಗಬ್ರಹ್ಮಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಸಂಜೆ 6.30ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಇವರೊಂದಿಗೆ ರಾಜ್ಯದ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ ಎಂದು ಚಿತ್ತರಂಜನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಂಕನಾಡಿ ಬ್ರಹ್ಮಬೈದರ್ಕಳ ಗರ ಕ್ಷೇತ್ರದ ವ್ಯವಸ್ಥಾಪಕ ಜಿ. ಕಿಶೋರ್ ಕುಮಾರ್, ಎಂ. ಮೋಹನ್ (ಪ್ರಧಾನ ಸಂಚಾಲಕರು, ಕಂಕನಾಡಿ ಗರಡಿ 150ರ ಸಂಭ್ರಮ ಸಮಿತಿ) ಕ್ಷೇತ್ರದ ಮೊಕ್ತೇಸರರಾದ ಬಿ.ವಿಠಲ, ಎ. ವಾಮನ, ಬಿ. ದಾಮೋದರ ನಿಸರ್ಗ, ದಿವರಾಜ್‌, ಜಗದೀಪ್ ಡಿ. ಸುವರ್ಣ, ಜೆ.ದಿನೇಶ್ ಅಂಚನ್, ಜೆ. ವಿಜಯ,ಶರಣ್ ಪಂಪ್ ವೆಲ್,ಸಂದೀಪ್ ಗರೋಡಿ ಉಪಸ್ಥಿತರಿದ್ದರು.

Similar News