ಬೆಂಗಳೂರು: ಮಾ.16ಕ್ಕೆ ಕೃಷಿ ಮೇಳ
Update: 2023-02-28 23:23 IST
ಬೆಂಗಳೂರು, ಫೆ. 28: ಕೇಂದ್ರೀಯ ಔಷಧೀಯ ಮತ್ತು ಸುಗಂಧ ಸಸ್ಯಗಳ ಸಂಸ್ಥೆ(ಸಿಎಸ್‍ಐಆರ್) ಸಂಶೋಧನಾ ಕೇಂದ್ರ ಅಲ್ಲಾಳಸಂದ್ರ ಜಿಕೆವಿಕೆ ಬೆಂಗಳೂರು ಇಲ್ಲಿ ಒಂದು ದಿನದ ಕೃಷಿ ಮೇಳವನ್ನು ಆಯೋಜಿಸಲಾಗಿದೆ.
ಮಾ.16ರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ಕೃತರು, ಉದ್ಯಮಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಔಷಧೀಯ ಮತ್ತು ಸುಗಂಧ ಸಸ್ಯಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಔಷಧೀಯ ಸಸ್ಯಗಳು ಮತ್ತು ಸಾರಭೂತ ತೈಲಗಳ ಕುರಿತು ಮೇಳ ನಡೆಯಲಿದೆ. ಆಯೋಜಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ www.cimap.res.inಗೆ ಸಂಪರ್ಕಿಸಲು ಸಂಸ್ಥೆಯ ಉಸ್ತುವಾರಿ ವಿಜ್ಞಾನಿ ಅಧಿಕೃತ ಪ್ರಕಟನೆಯಲ್ಲಿ ಕೋರಿದ್ದಾರೆ.