ಸಂಗೀತ ಗಾಯಕಿ ವಿದುಷಿ ನೀಲಾ ರಾಂಗೋಪಾಲ್ ನಿಧನ

Update: 2023-03-01 15:07 GMT

ಬೆಂಗಳೂರು, ಮಾ.1: ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ 87 ವರ್ಷದ ವಿದುಷಿ ನೀಲಾ ರಾಂಗೋಪಾಲ್ ಬುಧವಾರ ನಿಧನರಾಗಿದ್ದಾರೆ.  

1935ರಲ್ಲಿ ತಮಿಳುನಾಡಿನ ಕುಂಭಕೋಣಂನಲ್ಲಿ ಜನಿಸಿದ ಅವರು, ಮದುವೆಯ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. ವಿದ್ವತ್‍ಪೂರ್ಣ ಗಾಯನಕ್ಕೆ ಹೆಸರಾದ ನೀಲಾ ರಾಂಗೋಪಾಲ್, ತಮ್ಮ ಗರಡಿಯಲ್ಲಿ ನೂರಾರು ಗಾಯಕರನ್ನು ಜಗತ್ತಿಗೆ ಪರಿಚಯಿಸಿದ್ದಾರೆ. 

ಇವರಿಗೆ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ನೀಡುವ ಸಂಗೀತ ಕಲಾಚಾರ್ಯ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ‘ಸಂಗೀತ ಕಲಾಶ್ರೀ’ ರಾಮಸೇವಾ ಮಂಡಳಿ ನೀಡುವ ಸಂಗೀತ ಚೂಡಾಮಣಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. 

Similar News