ಮಂಗಳೂರು: ಮಾ.4, 5 ರಂದು ‘ವುಮೆನ್ ಎಕ್ಸ್‌ಪೋ’
ಮಂಗಳೂರು, ಮಾ.1: ಮಹಿಳಾ ಸೌಂದರ್ಯ, ಫ್ಯಾಷನ್, ರತ್ನಗಳು ಮತ್ತು ಆಭರಣಗಳು, ಆರೋಗ್ಯ ಮತ್ತು ಸ್ವಾಸ್ಥ್ಯ, ವ್ಯಾಪಾರ ಹಾಗೂ ತಾಯಿ ಮತ್ತು ಮಗುವಿನ ಆರೈಕೆಯನ್ನು ಕೇಂದ್ರೀಕರಿಸುವ ಪ್ರದರ್ಶನ ‘ವುಮೆನ್ ಎಕ್ಸ್‌ಪೋ’ ಮಾ.4 ಮತ್ತು 5ರಂದು ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಎಕ್ಸ್‌ಪೋದ ಪ್ರಾಜೆಕ್ಟ್ ಮ್ಯಾನೇಜರ್ ರಕ್ಷಿತಾ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ ಮತ್ತು ಫ್ಯಾಷನ್ ಕುರಿತು ಜಾಗೃತಿ ಮೂಡಿಸಲು ಮಹಿಳೆ ಯರ ನೇತೃತ್ವದ ಪ್ರಯತ್ನ ಇದಾಗಿದ್ದು, ಇಂಚರ ಫೌಂಡೇಶನ್, ಆಲ್ ಇಂಡಿಯಾ ಹೇರ್ ಬ್ಯೂಟಿ ಅಸೋಸಿಯೇಶನ್ ಮತ್ತು ಕರ್ನಾಟಕ ಹೇರ್ ಆ್ಯಂಡ್ ಬ್ಯೂಟಿ ಅಸೋಸಿಯೇಶನ್ ಸಹಯೋಗದಲ್ಲಿ ನಡೆಯಲಿದೆ ಎಂದರು.
‘ವುಮೆನ್ ಎಕ್ಸ್‌ಪೋ’ದಲ್ಲಿ ರತ್ನಗಳು ಮತ್ತು ಆಭರಣಗಳು, ಕುರ್ತಿಗಳು, ಡ್ರೆಸ್ ಮೆಟೀರಿಯಲ್ಸ್, ಕೈಮಗ್ಗ ಸೀರೆಗಳು, ಸೌಂದರ್ಯವರ್ಧಕಗಳು ಮತ್ತು ಸ್ಕಿನ್ ಕೇರ್, ಬೇಬಿ ಫುಡ್‌ಗಳು, ಬ್ಯಾಗ್‌ಗಳು, ಪಾದರಕ್ಷೆಗಳು, ಮೊಬೈಲ್ ಪರಿಕರಗಳು, ಅಟೋ ಮೊಬೈಲ್‌ಗಳು, ಸ್ಕೂಟರ್, ವೆಲ್‌ನೆಸ್ ಉತ್ಪನ್ನಗಳು ಮತ್ತು 50 ಪ್ಲಸ್ ಕಂಪೆನಿಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿ ಸುತ್ತವೆ ಎಂದರು.
ಕೆವಾಬಾಕ್ಸ್ ಸಂಸ್ಥಾ ಪಕ ಮತ್ತು ಸಿಇಒ ಮುಹಮ್ಮದ್ ದಿಲ್ಶಾದ್ ಮಾತನಾಡಿ, ಕೆವಾಬಾಕ್ಸ್ ಮತ್ತು ಸಿಟಿ ಗೋಲ್ಡ್ ಪ್ರಾಯೋಜಕರಾಗಿ ವುಮೆನ್ ಎಕ್ಸ್‌ಪೋದೊಂದಿಗೆ ಕೈಜೋಡಿಸಿದೆ. ಪ್ರಮುಖ ಪ್ರಾಯೋಜಕರಾಗಿ ನಾವು ಅನೇಕ ಕೊಡುಗೆಗಳನ್ನು ನೀಡಲಿದ್ದೇವೆ. ಮೇಕಿಂಗ್ ಶುಲ್ಕದ ಮೇಲೆ ಶೇ.55 ರಷ್ಟು ರಿಯಾಯಿತಿಯೊಂದಿಗೆ ಚಿನ್ನಾಭರಣ ಖರೀದಿ ಕೊಡುಗೆ, ವಜ್ರದ ಮೌಲ್ಯದ ಮೇಲೆ ಶೇ.20ರವರೆಗೆ ವಜ್ರ ಖರೀದಿಯ ಕೊಡುಗೆ, ಸೇರುವ ಪ್ರತಿ ಸದಸ್ಯರಿಗೆ ವಿಶೇಷ ಕೊಡುಗೆಯೊಂದಿಗೆ ಪಿಎಫ್‌ಎ ಸ್ಕೀಮ್ ಕೊಡುಗೆ ಮತ್ತು ಮಾ.20ರವರೆಗೆ ಮುಂಗಡ ಬುಕ್ಕಿಂಗ್‌ನಲ್ಲಿ ವಿಶೇಷ ಕೊಡುಗೆ ನೀಡಲಾಗುವುದು ಎಂದರು.
ವುಮನ್ ಎಕ್ಸ್‌ಪೋ ಅನೇಕ ಸಾಮಾಜಿಕ ಮಾಧ್ಯಮ ಮತ್ತು ಅನ್‌ಸೈಟ್ ಈವೆಂಟ್ ಸ್ಪರ್ಧೆಗಳಾದ ಮಾಮ್ ಆ್ಯಂಡ್ ಮಿ ಫೋಟೋಗ್ರಫಿ ಸ್ಪರ್ಧೆ, ವುಮೆನ್ ಎಕ್ಸ್‌ಪೋ ವೀಡಿಯೊ, ತಾಯಿಯ ಮೇಲಿನ ಕವಿತೆ, ಮಹಿಳಾ ಸ್ಪರ್ಧೆಗೆ ಸಂದೇಶ ಮತ್ತು ಎರಡು ದಿನಗಳ ಈವೆಂಟ್‌ನಲ್ಲಿ ಗೆಲ್ಲಲು ಹಲವು ಅನ್‌ಸೈಟ್ ಆಟಗಳು ಮತ್ತು ಪ್ರಶಸ್ತಿಗಳನ್ನು ನೀಡಲಾಗುವುದು.
ಈವೆಂಟ್‌ಗೆ ಸಿಟಿ ಗೋಲ್ಡ್ ಮತ್ತು ಕೆವಾಬಾಕ್ಸ್‌ನಿಂದ ಗೋಲ್ಡ್ ಪ್ರಾಯೋಜಕರಾಗಿ, ಟೊಯೋಟಾ ಯುನೈಟೆಡ್ ಕಾರ್ಸ್ ಆಟೋಮೊಬೈಲ್ ಪಾಲುದಾರರಾಗಿ, ಕೆಎಂಸಿ ಆಸ್ಪತ್ರೆ ಆರೋಗ್ಯ ಪಾಲುದಾರರಾಗಿ ದಿ ಡೈಮಂಡ್ ಫ್ಯಾಕ್ಟರಿ, ಜಿಂಟೆರಿಯೊ, ಶ್ರೀ ಅನಘಾ ಸುಝುಕಿ, ಟ್ಯಾಬಿಲ್ಲೊ, ಸಕೈಲೈನ್ಸ್, ಕುನಾಫಾ ವರ್ಲ್ಡ್, ಫಾರ್ಮ್ ಬೂಟೆಕ್, ಮಾಸ್ಟರ್ ಚೆಫ್, ಎ.ಕೆ.ಆ್ಯಪಲ್ ಪ್ಲೈ, ಕ್ಸೈಲೆಕ್ಸ್, ನಿಯೋಕೋಟ್ಸ್, ಸೇಫ್ಡೆಕೋರ್, ಸಿಲ್ವರ್ ಪ್ರಾಯೋಜಕರಾಗಿ ಮ್ಯಾಡ್ ಓವರ್ ಚೇರ್‌ಗಳು, ಮೊಬೈಲ್ ಆಕ್ಸೆಸರೀಸ್ ಪಾಲುದಾರರಾಗಿ ಶಾಪ್ ಯುನಿಕ್ ಸಹಕರಿಸಲಿದೆ.
ಮಹಿಳಾ ಎಕ್ಸ್‌ಪೋನಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದ್ದು, ಪ್ರವೇಶಾತಿ ಉಚಿತವಾಗಿರಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಟಿ ಗೋಲ್ಡ್ ನಿರ್ದೇಶಕ ನೌಶಾದ್ ಸಿ.ಎ. ಉಪಸ್ಥಿತರಿದ್ದರು.