BBMP ಬಜೆಟ್: ರಸ್ತೆ ಗುಂಡಿ ಮುಚ್ಚಲು 15 ಲಕ್ಷ ರೂ. ಘೋಷಿಸಿದ ಪಾಲಿಕೆ

Update: 2023-03-02 09:20 GMT

ಬೆಂಗಳೂರು, ಮಾ.2: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಗೆ ಪರಿಹಾರ ಒದಗಿಸಲು ದಿಟ್ಟ ಹೆಚ್ಚಿಯಿಟ್ಟಿರುವ ಬಿಬಿಎಂಪಿ ಆ್ಯಪ್‌ವೊಂದನ್ನು ಅಭಿವೃದ್ಧಿ ಪಡಿಸುವ ಜೊತೆಗೆ, ರಸ್ತೆ ಗುಂಡಿ ಮುಚ್ಚಲು ತಲಾ ವಾರ್ಡ್ ಒಂದರಂತೆ 15 ಲಕ್ಷ ರೂ. ನೀಡಲಾಗಿದೆ.

ಈ ಬಾರಿಯ ಆಯವ್ಯಯದಲ್ಲಿ ಎಲ್ಲಾ ರಸ್ತೆ-ಚರಂಡಿ, ಪಾದಚಾರಿ ಮಾರ್ಗ ದುರಸ್ತಿ ಹಾಗೂ ನಿರ್ವಹಣೆಯನ್ನು ಮಾಡಲಾಗುವುದು ಎಂದು ಬಿಬಿಎಂಪಿ ಪ್ರಕಟಿಸಿದೆ. ಇದಕ್ಕಾಗಿ ಪಾಲಿಕೆಯ 243 ವಾರ್ಡ್ಗಳಿಗೂ ಚರಂಡಿಗಳ ಹೊಳೆತ್ತುವಿಕೆ ಹಾಗೂ ನಿರ್ವಹಣೆಗೆ ತಲಾ 30 ಲಕ್ಷ ರೂ.

ರಸ್ತೆ ಗುಂಡಿ ಮುಚುವಿಕೆಗೆ ತಲಾ 15 ಲಕ್ಷ ರೂ, ಪಾದಚಾರಿ ಮಾರ್ಗ ನಿರ್ವಹಣೆಗೆ ತಲಾ 25 ಲಕ್ಷ ರೂ ಹಾಗೂ ಮಾನ್ಸೂನ್ ಕಂಟ್ರೋಲ್ ರೂಂ ನಿರ್ವಹಣೆಗೆ ತಲಾ 5 ಲಕ್ಷದಂತೆ ಪ್ರತಿ ವಾರ್ಡಗೆ ಒಟ್ಟು 75 ಲಕ್ಷ ರೂ ನೀಡಲಾಗುವುದು. ಇದರ ಹೊರತಾಗಿ ವಾರ್ಡ್ನ ಇತರೇ ಕಾಮಗಾರಿಗಳಿಗೆ ತಲಾ 125 ಲಕ್ಷ ರೂ ಸೇರಿಸಿ ಪಾಲಿಕೆಯ 243 ವಾರ್ಡ್ಗಳಿಗೂ ತಲಾ ಎರಡು ಕೋಟಿಗಳಷ್ಟು ಹಣ ಬಿಡುಗಡೆ ಮಾಡಲಾಗುವುದು. 

ಕಳೆದ ಎರಡು ಮೂರು ವರ್ಷಗಳಲ್ಲಿ ವಾರ್ಡ್ ರಸ್ತೆಗಳ ಅಭಿವೃದ್ಧಿ ಹಾಗೂ ಮೂರು ವರ್ಷಗಳ ಡಿಎಲ್‌ಪಿ ಅವಧಿ ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ವಾರ್ಡ್ ಗೆ  2 ಕೋಟಿ ರೂ ಕಾಮಗಾರಿ ಹಣ ನಿಗದಿಪಡಿಸಲಾಗಿದೆ.

ಇನ್ನೂ, ಮಳೆಯಿಂದ ರಸ್ತೆ ಗುಂಡಿಗಳ ತೊಂದರೆ ಕಾಡಿತ್ತು. ಈ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ವ್ಯವಸ್ಥಿತವಾಗಿ ಹಾಗೂ ವೈಜ್ಞಾನಿಕವಾಗಿ ಕೈಗೊಳ್ಳಲು ಪಾಲಿಕೆಯು ‘ಫಿಕ್ಸ್ ಮೈ ಸ್ಟ್ರೀಟ್’ ಎಂಬ ಆಪ್‌ವೊಂದನ್ನು ಅಭಿವೃದ್ಧಿ ಪಡಿಸಿದೆ. ಇದರಲ್ಲಿ ರಸ್ತೆ ಗುಂಡಿಯ ಚಿತ್ರವನ್ನು ಜಿಯೋಟ್ಯಾಗ್‌ ನೊಂದಿಗೆ ಅಪ್‌ಲೋಡ್ ಮಾಡಬಹುದು. ಆನಂತರ ದರುಸ್ಥಿ ಮಾಡಲಾಗುವುದು ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಘೋಷಣೆ ಮಾಡಿದ್ದಾರೆ.

Similar News