ಬಿಬಿಎಂಪಿಯ 11,307 ಮಂದಿ ಪೌರ ಕಾರ್ಮಿಕರ ನೇರ ನೇಮಕಾತಿಗೆ ಆದೇಶ

Update: 2023-03-02 18:33 GMT

ಬೆಂಗಳೂರು, ಮಾ. 2: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ನೇರ ಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 11,307 ಮಂದಿ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮೂಲಕ ಖಾಯಂಗೊಳಿಸಲು ನಗರಾಭಿವೃದ್ಧಿ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಗುರುವಾರ ಆದೇಶ ಹೊರಡಿಸಿದ್ದಾರೆ.

ಷರತ್ತು: ಬಿಬಿಎಂಪಿಯಲ್ಲಿ ಹಾಲಿ ನೇರಪಾವತಿ ಕ್ಷೇಮಾಭಿವೃದ್ಧಿ/ದಿನಗೂಲಿ ಆಧಾರದಲ್ಲಿ ಎರಡು ವರ್ಷಗಳ ಕಡಿಮೆ ಇಲ್ಲದಂತೆ, ನಿರಂತರವಾಗಿ ಕೆಲಸ ನಿರ್ವಹಿಸಿರುವ ಪೌರಕಾರ್ಮಿಕರಿಗೆ ಆದ್ಯತೆ ನೀಡತಕ್ಕದ್ದು. ಪಾಲಿಕೆಯಲ್ಲಿ ಹಾಲಿ ನೇರಪಾವತಿ/ಕ್ಷೇಮಾಭಿವೃದ್ಧಿ/ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ 2 ವರ್ಷಗಳ ಮೇಲ್ಪಟ್ಟು ಪಾಲಿಕೆಯಿಂದ ವೇತನ ಪಡೆದು ದಾಖಲಾತಿಗಳನ್ನು ನೇಮಕಾತಿಯಲ್ಲಿ ಆದ್ಯತೆಗೆ ಪರಿಗಣಿಸತಕ್ಕದ್ದು

ಆದ್ಯತೆಯನ್ನು ನೀಡುವಲ್ಲಿ 2 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳ ಸೇವಾವಧಿ ಒಂದೇ ಇದ್ದ ಪಕ್ಷದಲ್ಲಿ ಅಂತಹ ಅಭ್ಯರ್ಥಿಗಳ ಜೇಷ್ಠತೆಯನ್ನು ಅವರ ವಯಸ್ಸಿಗೆ ಅನುಗುಣವಾಗಿ ಅಂದರೆ ಹೆಚ್ಚು ವಯಸ್ಕರನ್ನು ಕಡಿಮೆ ವಯಸ್ಕರಿಗಿಂತ ಮೇಲೆ ಪರಿಗಣಿಸಬೇಕು ಹಾಗೂ ಹುಟ್ಟಿದ ದಿನಾಂಕ ಹಾಗೂ ಸೇವಾ ಅವಧಿ ಒಂದೇ ಆಗಿದ್ದಲ್ಲಿ ಲಾಟರಿ ಮುಖಾಂತರ ಪರಿಗಣಿಸತಕ್ಕದ್ದು. ಸದರಿ ಪೌರಕಾರ್ಮಿಕರ ವೇತನವನ್ನು ಎಸ್‍ಎಫ್‍ಸಿ ಅನುದಾನದಡಿ ರಾಜ್ಯ ಆರ್ಥಿಕ ಆಯೋಗದ ಶಿಫಾರಸಿನಂತೆ ಇರುವ ಅಧಿಕಾರ ಹಂಚಿಕೆಗೆ ಮಿತಿಗೊಳಿಸುವುದು ಹಾಗೂ ಇದಕ್ಕೆ ತಗಲುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ಪಾಲಿಕೆಯ ಸ್ವಂತ ನಿಧಿಯಿಂದ ಭರಿಸತಕ್ಕದ್ದು.

ಸದರಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದ ನಂತರ ನರಪಾವತಿಯಡಿ ಮಂಜೂರಾದ ಹುದ್ದೆಗಳು ತಂತಾನೆ ರದ್ದಾಗುತ್ತವೆ. ಪ್ರಸ್ತಾವಿತ ಪೌರಕಾರ್ಮಿಕರ ಖಾಯಂಮಾತಿಯು ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಇತರ ವರ್ಗಗಳ ನೌಕರರಿಗೆ ಪೂರ್ವ ನಿದರ್ಶನವಾಗತಕ್ಕದ್ದಲ್ಲ. 11,307 ಹುದ್ದೆಗಳು ಸದರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ನಿವೃತ್ತಿ /ನಿಧನ/ವಜಾಗೊಳಿಸುವಿಕೆಯಿಂದ ತರವಾದ ದಿನಾಂಕದಿಂದ ರದ್ದಾಗುತ್ತವೆ ಎಂದು ಷರತ್ತು ವಿಧಿಸಲಾಗಿದೆ.

Similar News