×
Ad

ಮಂಗಳೂರು: ‘ವಿಮೆನ್ ಎಕ್ಸ್‌ಪೋ’ಗೆ ಚಾಲನೆ

Update: 2023-03-04 19:56 IST

ಮಂಗಳೂರು : ಝೆಡ್‌ಎಂಝಡ್ ಇವೆಂಟ್ಸ್ ವತಿಯಿಂದ ಸಿಟಿ ಗೋಲ್ಡ್ ಮತ್ತು ಕೆವಾಬಾಕ್ಸ್ ಪ್ರಾಯೋಜಕತ್ವದಲ್ಲಿ ನಗರದ ಟಿ.ಎಂ.ಎ.ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಎರಡು ದಿನಗಳ ಕಾಲ ನಡೆಯುವ ವಿಮೆನ್ ಎಕ್ಸ್‌ಪೋ-2023ಗೆ ನಗರದ ಮಹಾರಾಜ ಗ್ರೂಫ್‌ನ ಸಿಒಒ ಕೋಮಲ್ ಪ್ರಭು ಶನಿವಾರ ಚಾಲನೆ ನೀಡಿದರು.

ಯೆನೆಪೊಯ ಸ್ಕೂಲ್ ಮತ್ತು ಪಿಯು ಕಾಲೇಜಿನ ನಿರ್ದೇಶಕ ಮಿಸ್ರಿಯಾ ಜಾವೇದ್ ಮಾತನಾಡಿ ಮಹಿಳೆಯ ಸಾಧನೆಯನ್ನು ಜಗತ್ತು ಕೂಡ ಈಗ ಸ್ವೀಕರಿಸಿಕೊಂಡು  ಬೆಂಬಲ ನೀಡುತ್ತಿರುವುದು ಸಂತೋಷದ ವಿಚಾರ ಎಂದರು.

ಝೆಡ್‌ಎಂಝಡ್ ಇವೆಂಟ್ಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಹೀರ್ ಅಹ್ಮದ್ ಮಾತನಾಡಿ  ಮಹಿಳಾ ಸೌಂದರ್ಯ, ಫ್ಯಾಷನ್, ಆಭರಣ, ಆರೋಗ್ಯ, ವ್ಯಾಪಾರ, ತಾಯಿ ಮತ್ತು ಮಗುವಿನ ಆರೈಕೆಯನ್ನು ಕೇಂದ್ರೀಕರಿಸುವ ಪ್ರದರ್ಶನವಾಗಿದೆ. 50ಕ್ಕೂ ಅಧಿಕ ಕಂಪನಿಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಗ್ರಾಹಕರು ಕೂಡ ಉತ್ತಮ ಸ್ಪಂದನೆ ನೀಡಿದ್ದಾರೆ ಎಂದರು.

ಈ ಸಂದರ್ಭ ಅನ್ ಮೇಕಪ್ ಸ್ಟುಡಿಯೋದ ಮುಖ್ಯಸ್ಥೆ ಅಶಿಕಾ ನೈನಾಝ್, ದಿ ಡೆಂಟಲ್ ಸ್ಟುಡಿಯೋ ಅತ್ತಾವರದ ಡಾ. ಅಯೆಶಾ ನಸ್ರೀನ್, ಮಾಮ್ ಇನ್‌ಪ್ಲೊಯೆಸರ್ ಅಮೃತಾ ಶರಫ್, ಅತ್ತಾವರದ ದಿ ಡೆಂಟಲ್ ಸ್ಟುಡಿಯೋದ ಡಾ. ನಫೀಸಾ ಶಿರಿನ್ ಶುಭ ಹಾರೈಸಿದರು. ಮಾನುಷಾ ಕಾರ್ಯಕ್ರಮ ನಿರೂಪಿಸಿದರು.

Similar News