ನಮ್ಮ ದೇಶ ಗೋಮೂತ್ರ ಸಿಂಪಡಿಸಿ ಸ್ವಾತಂತ್ರ್ಯ ಪಡೆದುಕೊಂಡಿಲ್ಲ: ಬಿಜೆಪಿ ವಿರುದ್ಧ ಉದ್ಧವ್‌ ಠಾಕ್ರೆ ವಾಗ್ದಾಳಿ

"ಸರ್ದಾರ್‌ ಪಟೇಲ್‌ ಆರೆಸ್ಸೆಸ್ ನಿಷೇಧಿಸಿದರು, ಬಿಜೆಪಿಯವರು ಪಟೇಲ್‌ರ ಹೆಸರನ್ನೇ ಕದ್ದರು"

Update: 2023-03-06 02:09 GMT

ಮುಂಬೈ: ನಮ್ಮ ದೇಶವು ಗೋಮೂತ್ರವನ್ನು ಸಿಂಪಡಿಸಿ ಸ್ವಾತಂತ್ರ್ಯವನ್ನು ಪಡೆದುಕೊಂಡಿಲ್ಲ. ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣ ತ್ಯಾಗ ಮಾಡಿದ ನಂತರ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ (Uddhav Thackeray) ಹೇಳಿದ್ದಾರೆ. 

ರವಿವಾರ ಖೇಡ್‌ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, "ನಮ್ಮ ದೇಶವು ಗೋಮೂತ್ರವನ್ನು ಸಿಂಪಡಿಸಿ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆಯೇ? ಗೋಮೂತ್ರವನ್ನು ಸಿಂಪಡಿಸಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯೇ?, ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ನಂತರ ನಮಗೆ ಸ್ವಾತಂತ್ರ್ಯ ಸಿಕ್ಕಿತು" ಎಂದು ಅವರು ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರು ಸರ್ದಾರ್ ಪಟೇಲ್, ಸುಭಾಷ್ ಚಂದ್ರ ಬೋಸ್ ಅವರ ಹೆಸರನ್ನು ಕದ್ದಂತೆ, ಅವರು (ಏಕನಾಥ್‌ ಶಿಂಧೆ ಬಣ) ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಕದ್ದಿದ್ದಾರೆ.  ಸರ್ದಾರ್ ಪಟೇಲ್ ಆರೆಸ್ಸೆಸ್ (RSS) ಅನ್ನು ನಿಷೇಧಿಸಿದರು, ಆದರೆ, ಅವರು ಸರ್ದಾರ್ ಪಟೇಲ್ ಹೆಸರನ್ನು ಕದ್ದರು. ಅದೇ ರೀತಿ ಅವರು ಸುಭಾಷ್ ಚಂದ್ರ ಬೋಸ್ ಅವರನ್ನು ಕದ್ದರು. ಬಾಳಾಸಾಹೇಬ್ ಠಾಕ್ರೆಯವರೊಂದಿಗೆ ಅದೇ ಮಾಡಿದರು. ಮೋದಿ, ಶಿವಸೇನೆ ಮತ್ತು ಬಾಳಾಸಾಹೇಬ್ ಠಾಕ್ರೆ ಅವರ ಫೋಟೋ ಹಾಗೂ ಹೆಸರು ಹೇಳದೆ ಮತ ಕೇಳಲು ನಾನು ಅವರಿಗೆ ಸವಾಲು ಹಾಕುತ್ತೇನೆ" ಎಂದು ಉದ್ಧವ್ ಠಾಕ್ರೆ ಹೇಳಿದರು.

ಇದನ್ನೂ ಓದಿ: ಚರ್ಚ್‌ ಮೇಲೆ ಬಜರಂಗದಳ ದಾಳಿ: ಎರಡು ವಾರ ಕಳೆದರೂ ಎಫ್‌ಐಆರ್‌ ದಾಖಲಿಸದ ಪೊಲೀಸರು; ವರದಿ

Similar News