ರಾಜ್ಯಮಟ್ಟದ ಸಣ್ಣ ಕಥಾ ಸ್ಪರ್ಧೆ
Update: 2023-03-06 19:00 IST
ಬೆಂಗಳೂರು, ಮಾ.6: ಲೇಖಕ ರವಿ ಬೆಳಗೆರೆ ಅವರ ಜನ್ಮದಿನದ ಸವಿನೆನಪಿಗಾಗಿ ಯುವ ವಾಗ್ಮಿಗಳ ಬಳಗ ‘ರಾಜ್ಯಮಟ್ಟದ ಸಣ್ಣ ಕಥಾ ಸ್ಪರ್ಧೆ’ಯನ್ನು ಹಮ್ಮಿಕೊಂಡಿದೆ.
ಕತೆಯು ಸಾವಿರ ಪದ ಮಿತಿಯೊಳಗಿರಬೇಕಿದ್ದು, ಈ ಹಿಂದೆ ಎಲ್ಲೂ ಪ್ರಕಟಗೊಂಡಿರಬಾರದು. ಸ್ಪರ್ಧೆಯಲ್ಲಿ ಭಾಗವಹಿಸಲು ವಯಸ್ಸಿನ ಮಿತಿ ಇರುವುದಿಲ್ಲ. ಕೃತಿ ಚೌರ್ಯ ಮಾಡುವಂತಿಲ್ಲ. ಉತ್ತಮ ಮೂರು ಕತೆಗಳಿಗೆ ಬಹುಮಾನ ಹಾಗೂ ಅಭಿನಂದನ ಪತ್ರ ನೀಡಲಾಗುವುದು ಎಂದು ಬಳಗ ತಿಳಿಸಿದೆ.
ಮಾ.14 ರೊಳಗೆ ಕತೆಯನ್ನು 74068 54007ವಾಟ್ಸಪ್ ನಂಬರ್‍ಗೆ ಕಳುಹಿಸಲು ತಿಳಿಸಲಾಗಿದ್ದು, ಆಯೋಜಕರು ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ ಎಂದು ಯುವ ವಾಗ್ಮಿಗಳ ಪ್ರದಾನ ಆಯೋಜಕ ದೀಕ್ಷಿತ್ ನಾಯರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.