ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: 10 ದಿನಗಳ ಕಾಲ ಆರೋಪಿ ಎನ್‍ಐಎ ವಶಕ್ಕೆ
Update: 2023-03-06 21:41 IST
ಬೆಂಗಳೂರು, ಮಾ. 6: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮುಹಮ್ಮದ್ ಶಾರಿಕ್‍ನನ್ನು 10 ದಿನಗಳ ಎನ್‍ಐಎ ಕಸ್ಟಡಿಗೆ ಒಪ್ಪಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡಿದ್ದ ಶಾರಿಕ್‍ನನ್ನು ಡಿ.17ರಂದು ಬೆಂಗಳೂರಿಗೆ ಕರೆತಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಆರೋಗ್ಯ ಚೇತರಿಸಿಕೊಂಡಿರುವ ಹಿನ್ನೆಲೆ ಸೋಮವಾರ ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆನಂತರ, ಆತನನ್ನು ಸಿಟಿ ಸಿವಿಲ್ ಕೋರ್ಟ್‍ನಲ್ಲಿರೋ ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಈ ವೇಳೆ ಆರೋಪಿಯನ್ನು 10 ದಿನಗಳ ಕಾಲ ಎನ್‍ಐಎ ಕಸ್ಟಡಿಗೆ ನೀಡುವಂತೆ ಕೋರಲಾಯಿತು. ಅದರಂತೆ ನ್ಯಾಯಾಲಯ ಶಾರಿಕ್‍ನನ್ನು ಎನ್‍ಐಎ ಸುಪರ್ದಿಗೆ ಒಪ್ಪಿಸಿತು.