×
Ad

ರೈಸ್ ಪುಲ್ಲಿಂಗ್ ಹೆಸರಲ್ಲಿ ವಂಚನೆ: 8 ಮಂದಿ ಆರೋಪಿಗಳ ಬಂಧನ

Update: 2023-03-08 17:05 IST

ಬೆಂಗಳೂರು, ಮಾ.8: ರೈಸ್ ಪುಲ್ಲಿಂಗ್ ಮಿಷನ್ ನಿರ್ಮಿಸುವುದಾಗಿ ಸಾರ್ವಜನಿಕರಿಂದ ಲಕ್ಷಾಂತರ ರೂ.ಗಳು ಹಣ ಪಡೆದು ವಂಚನೆ ಮಾಡುತ್ತಿದ್ದ ಆರೋಪದಡಿ 8 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 35.30ಲಕ್ಷ ರೂ.ನಗದು ಜಪ್ತಿ ಮಾಡಿದ್ದಾರೆ.

ರಾಜೇಶ್ (36), ಗೌಸ್ ಪಾಷಾ (52), ಸ್ಟೀಪನ್ (38), ಸಾಹಿಲ್ (35), ಶ್ರೀನಿವಾಸ (35), ವಿಕಾಸ್ (27), ಕುಮಾರ್ (29), ಸ್ರೀವಲ್ಸ್‍ಸಲ್ (42) ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ. 

ಆರೋಪಿಗಳು ಎಂಜಿ ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ಗ್ರಾಹಕರನ್ನು ಸಂಪರ್ಕಿಸಿ ತಮ್ಮ ಬಳಿ ಬೆಲೆ ಬಾಳುವ ರೈಸ್ ಪುಲ್ಲಿಂಗ್ ಮಿಷನ್ ಯಂತ್ರವಿಟ್ಟು ಇದು ಕೋಟ್ಯಾಂತರ ರೂ ಬೆಲೆ ಬಾಳುವುದಾಗಿದೆ ಎಂದು ಸಾರ್ವಜನಿಕರನ್ನು ವಂಚಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಆಧರಿಸಿ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Similar News