×
Ad

ಹೈಕೋರ್ಟ್ ಹಿರಿಯ ವಕೀಲ ಡಿ.ಎನ್.ನಂಜುಂಡರೆಡ್ಡಿ ನಿಧನ

Update: 2023-03-09 21:13 IST

ಬೆಂಗಳೂರು, ಮಾ.9: ಹೈಕೋರ್ಟ್‍ನ ಹಿರಿಯ ವಕೀಲ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಿ.ಎನ್.ನಂಜುಂಡರೆಡ್ಡಿ(68) ಗುರುವಾರ ಬೆಳಗ್ಗೆ 9.30ರ ಸಮಯದಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಅವಿವಾಹಿತರಾಗಿದ್ದರು.

ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಬಾಗೇಪಲ್ಲಿ ತಾಲೂಕಿನ ಗಡಿಪಂ ಗ್ರಾಮದಲ್ಲಿ ಡಿ.ಎನ್.ನಂಜುಂಡರೆಡ್ಡಿ ಅವರ ಅಂತ್ಯಕ್ರಿಯೆ  ನೆರವೇರಿತು. ದೇವರಗುಡಿಪಲ್ಲಿ ಗ್ರಾಮದಲ್ಲಿ ಜನಿಸಿದ್ದ ನಂಜುಂಡರೆಡ್ಡಿ ಅವರು, ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ "ಸಾಂವಿಧಾನಿಕ ಕಾನೂನು" ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 

ಹೈಕೋರ್ಟ್‍ನಲ್ಲಿ ಚುನಾವಣಾ ತಕರಾರು ಅರ್ಜಿಗಳನ್ನು ನಡೆಸುವುದರಲ್ಲಿ ಎತ್ತಿದ ಕೈ ಎನಿಸಿದ್ದ ಅವರು, ರೈಲ್ವೆ ಸಚಿವರಾಗಿದ್ದ ಜಾಫರ್ ಷರೀಫ್ ಅವರ ಚುನಾವಣಾ ತಕರಾರು (1991) ಅರ್ಜಿ ಗೆಲುವಿನ ಹಿಂದೆ ಹಿರಿಯ ವಕೀಲ ಜಿ.ವಿ.ಶಾಂತರಾಜು ಅವರೊಂದಿಗೆ ವಾದ ಮಂಡಿಸಿದ್ದರು.

ಹೈಕೋರ್ಟ್ ವಕೀಲರುಗಳಾದ ಚಿತ್ರದುರ್ಗದ ಬ್ಯಾರಿಸ್ಟರ್ ವಾಸುದೇವ ರೆಡ್ಡಿ ಮತ್ತು ಗೌರಿಬಿದನೂರಿನ ಜಿ.ವಿ. ಶಾಂತರಾಜು ಅವರ ಬಳಿ ಕಿರಿಯ ವಕೀಲರಾಗಿ ವೃತ್ತಿ ಆರಂಭಿಸಿದ್ದ ಅವರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬಿಬಿಎಂಪಿ ಪರ ವಕೀಲರಾಗಿ ಸುದೀರ್ಘ ಕಾಲ ವಕೀಲಿಕೆ ನಡೆಸಿದ್ದರು. 

Similar News