ಬೆಂಗಳೂರಿನಲ್ಲಿ ಇಂದಿನಿಂದ ಬಹುಭಾಷಾ ಕ್ಯಾಲಿಗ್ರಫಿ ಪ್ರದರ್ಶನ ಹಾಗೂ ವಿಚಾರಗೋಷ್ಠಿ
ಬೆಂಗಳೂರು, ಮಾ.9: ಬ್ಯಾರೀಸ್ ಗ್ರೂಪ್ ಪ್ರಾಯೋಜಕತ್ವದಲ್ಲಿ ಇನ್ಸ್‍ಟಿಟ್ಯೂಟ್ ಆಫ್ ಇಂಡೊ ಇಸ್ಲಾಮಿಕ್ ಆರ್ಟ್ ಅಂಡ್ ಕಲ್ಚರ್ ಸಂಘಟಿಸಿರುವ ಪ್ರಥಮ ಬಹುಭಾಷಾ ಕ್ಯಾಲಿಗ್ರಫಿ ಪ್ರದರ್ಶನ ಹಾಗೂ ವಿಚಾರಗೋಷ್ಠಿಗಳು ಮಾ.10 ರಿಂದ 12ರವರೆಗೆ ನಗರದ ಬೃಂಗ್ಟನ್ ರಸ್ತೆಯಲ್ಲಿರುವ ಪ್ರೆಸ್ಟಿಜ್ ಫಾಲ್ಕನ್ ಟವರ್ಸ್ ನ ದಿ ಫಾಲ್ಕನ್ ಡೆನ್ ಸಭಾಂಗಣದಲ್ಲಿ ಜರುಗಲಿದೆ.
ಕ್ಯಾಲಿಗ್ರಫಿ ಪ್ರದರ್ಶನವನ್ನು ಮಾ.10ರಂದು ಬೆಳಗ್ಗೆ 10.30ಕ್ಕೆ ಪ್ರೆಸ್ಟೀಜ್ ಗ್ರೂಪ್‍ನ ಅಧ್ಯಕ್ಷ ಇರ್ಫಾನ್ ರಝಾಕ್ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಅಮೀರೆ ಶರೀಅತ್ ಮೌಲಾನ ಮುಫ್ತಿ ಸಗೀರ್ ಅಹ್ಮದ್ ರಶಾದಿ ವಿಚಾರಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಇಂಡಿಯಾ ಬಿಲ್ಡರ್ಸ್‍ನ ಅಧ್ಯಕ್ಷ ಝಿಯಾವುಲ್ಲಾ ಶರೀಫ್, ಪ್ರೆಸ್ಟೀಜ್ ಗ್ರೂಪ್‍ನ ಅಧ್ಯಕ್ಷ ಇರ್ಫಾನ್ ರಝಾಕ್, ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಕಲಾವಿದ ಪ್ರೊ.ಕೆ.ಸಿ.ಜನಾರ್ದನ್, ತುನಿಷಿಯಾ ದೇಶದ ರಾಯಭಾರಿ ಶಬೀನಾ ಸುಲ್ತಾನಾ, ಕಲಾವಿದೆ ಎನ್.ಪುಷ್ಪಮಾಲಾ ಭಾಗವಹಿಸಲಿದ್ದು, ವಿಚಾರಗೋಷ್ಠಿಯ ಅಧ್ಯಕ್ಷತೆ ಬ್ಯಾರೀಸ್ ಗ್ರೂಪ್‍ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.