×
Ad

ಮಂಗಳೂರು: ಪೇಸ್ ವಿಸ್ಡಮ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‍ನ ನೂತನ ಕಚೇರಿ ಉದ್ಘಾಟನೆ

Update: 2023-03-10 15:05 IST

ಮಂಗಳೂರು: ಪ್ರಸಿದ್ಧ ಡೀಪ್ ಟೆಕ್ ಪ್ರಾಡಕ್ಟ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಲಹಾ ಸಂಸ್ಥೆಯಾದ ಪೇಸ್ ವಿಸ್ಡಮ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‍ನ ಹೊಸ ಕಚೇರಿಯನ್ನು ಮಂಗಳೂರಿನ ಬಿಜೈನಲ್ಲಿ ಗುರುವಾರ ಉದ್ಘಾಟಿಸಲಾಯಿತು. ಪೇಸ್ ವಿಸ್ಡಮ್ ಸೊಲ್ಯೂಷನ್ಸ್ ಸಿಇಓ ಶ್ರೀಹರಿ ಭಟ್ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಗಣ್ಯ ಅತಿಥಿಗಳು, ಸ್ಥಾಪಕ ಪಾಲುದಾರರು ಮತ್ತು ಸಂಸ್ಥೆಯ ಉದ್ಯೋಗಿಗಳು ಉಪಸ್ಥಿತರಿದ್ದರು.

ಅತ್ಯಾಧುನಿಕ ಸೌಲಭ್ಯಗಳು ಮತ್ತು ಡಿಜಿಟಲ್ ಮೂಲಸೌಕರ್ಯಗಳಿರುವ ಈ ಹೊಸ ಕಚೇರಿ, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತಂಡವನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ಸಾಫ್ಟ್ ವೇರ್ ಅಭಿವೃದ್ಧಿಯ ಕೇಂದ್ರವಾಗಿ, ಇದು ದಕ್ಷಿಣ ಕನ್ನಡ, ಉಡುಪಿ ಮತ್ತು ಹತ್ತಿರದ ಜಿಲ್ಲೆಗಳ ಸ್ಥಳೀಯ ಪ್ರತಿಭಾವಂತರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದಲ್ಲಿ ಪ್ರಮುಖ ಪಾತ್ರವಹಿಸಲಿದೆ. ಜತೆಗೆ ಕೌಶಲ ಮೇಲ್ದರ್ಜೆಗೇರಿಸುವ "ಅಪ್‍ಸ್ಕಿಲ್" ಕಾರ್ಯಕ್ರಮದ ಮೂಲಕ, ಕಂಪನಿಯು ಉದ್ಯೋಗಾಂಕ್ಷಿಗಳ ಶೈಕ್ಷಣಿಕ ಹಿನ್ನೆಲೆಯನ್ನು ಲೆಕ್ಕಿಸದೆಯೇ ಐಟಿ ವಲಯದಲ್ಲಿ  ಯಶಸ್ವಿ ವೃತ್ತಿಜೀವನವನ್ನು ಹೊಂದಲು  ಶ್ರೇಣಿ - 2 ಮತ್ತು ಶ್ರೇಣಿ - 3 ನಗರಗಳ ಯುವ ಸಮೂಹಕ್ಕೆ ಕೌಶಲ್ಯ ಅಭಿವೃದ್ಧಿಯನ್ನು ನೀಡುವ ಗುರಿ ಹೊಂದಿದೆ.

ಪೇಸ್ ವಿಸ್ಡಮ್ ಸೊಲ್ಯೂಷನ್ಸ್ 2012 ರಲ್ಲಿ ಸ್ಥಾಪನೆಯಾದಾಗಿನಿಂದ ಪ್ರಪಂಚದಾದ್ಯಂತದ ಗ್ರಾಹಕರಿಗೆ ಪರಿಣಾಮಕಾರಿ ಸಾಫ್ಟ್ ವೇರ್ ಪರಿಹಾರಗಳನ್ನು ಒದಗಿಸುತ್ತಿದೆ. ಹಲವಾರು ಬೆಳವಣಿಗೆಯ ಹಂತದ ಸ್ಟಾರ್ಟ್ ಅಪ್‍ಗಳಿಗೆ ವರ್ಚುವಲ್ ಸಿಟಿಓ ಸೇವೆಗಳನ್ನು ಸಹ ಕಂಪನಿ ಒದಗಿಸುತ್ತಿದೆ. ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿರುವ ಮತ್ತು ಸ್ಯಾನ್‍ಫ್ರಾನ್ಸಿಸ್ಕೋ ಮತ್ತು ಫ್ರಾಂಕ್‍ಫರ್ಟ್ ಪ್ರದೇಶಗಳಲ್ಲಿ ಸಕ್ರಿಯ ಸಹಯೋಗವನ್ನು ಹೊಂದಿದೆ.

Similar News