ಅಲಹಾಬಾದ್‌ ಹೈಕೋರ್ಟ್‌ ಆವರಣದಲ್ಲಿರುವ ಮಸೀದಿ ತೆರವುಗೊಳಿಸುವ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

Update: 2023-03-13 11:00 GMT

ಹೊಸದಿಲ್ಲಿ: ತನ್ನ ಆವರಣದಲ್ಲಿರುವ ಮಸೀದಿಯನ್ನು ತೆರವುಗೊಳಿಸುವ ಕುರಿತಂತೆ ಅಲಹಾಬಾದ್‌ ಹೈಕೋರ್ಟ್‌ 2017 ರಲ್ಲಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇಂದು ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಂ ಆರ್‌ ಶಾಹ್‌ ಮತ್ತು ಸಿ ಟಿ ರವಿಕುಮಾರ್‌ ಅವರ ಪೀಠವು ವಕ್ಫ್‌ ಮಸೀದಿ ಮತ್ತು ಯು ಪಿ ಸುನ್ನಿ ಸೆಂಟ್ರಲ್‌ ಬೋರ್ಡ್‌ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ವಜಾಗೊಳಿಸಿತಲ್ಲದೆ ಅಲಹಾಬಾದ್‌ ಹೈಕೋರ್ಟ್‌ ಆವರಣದಲ್ಲಿರುವ ಮಸೀದಿಯನ್ನು ಕೆಡವಲು ಅರ್ಜಿದಾರರಿಗೆ ಮೂರು ತಿಂಗಳ ಕಾಲಾವಕಾಶ ಒದಗಿಸಿದೆ.

ಪರ್ಯಾಯ ಜಮೀನಿಗಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಲು ಅರ್ಜಿದಾರರಿಗೆ ಅನುಮತಿಸಿದ ಸುಪ್ರೀಂ ಕೋರ್ಟ್‌, ಅರ್ಜಿದಾರರು ನಿಗದಿತ ಮೂರು ತಿಂಗಳೊಳಗೆ ಮಸೀದಿಯನ್ನು ಕೆಡವಲು ವಿಫಲರಾದರೆ, ಸಂಬಂಧಿತ ಪ್ರಾಧಿಕಾರಗಳು ಮಸೀದಿಯನ್ನು ನೆಲಸಮಗೊಳಿಸಬಹುದು ಎಂದು ಹೇಳಿದೆ.

ಈ ಮಸೀದಿಯು ಸರ್ಕಾರಿ ಲೀಸ್‌ ಜಮೀನಿನಲ್ಲಿದೆ ಹಾಗೂ ಇದನ್ನು 2002 ರಲ್ಲಿಯೇ ರದ್ದುಗೊಳಿಸಲಾಗಿತ್ತು ಎಂಬ ಅಂಶವನ್ನು ಸುಪ್ರೀಂ ಕೋರ್ಟ್‌ ತನ್ನ ಆದೇಶ ಹೊರಡಿಸುವ ವೇಳೆ ಗಣನೆಗೆ ತೆಗೆದುಕೊಂಡಿದೆ.

ಇದನ್ನೂ ಓದಿ: ರಕ್ಷಣಾ ಸಚಿವಾಲಯ ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಬಾರದು: ಸುಪ್ರೀಂ ಕೋರ್ಟ್‌

Similar News