×
Ad

ಮಂಗಳೂರು: ಮಾ.16ರಂದು ಫಲಾನುಭವಿಗಳ ಸಮಾವೇಶ ಹಿನ್ನೆಲೆ; ಹಲವು ಕಡೆ ಪಾರ್ಕಿಂಗ್ ವ್ಯವಸ್ಥೆ

ಲಾಲ್‌ಬಾಗ್‌ನಿಂದ -ನಾರಾಯಣಗುರು ವೃತ್ತ ಸಂಚಾರ ನಿಷೇಧ

Update: 2023-03-14 20:39 IST

ಮಂಗಳೂರು, ಮಾ.14: ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಮಾ.16ರಂದು ನಡೆಯಲಿರುವ ಫಲಾನುಭವಿಗಳ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭಾಗವಹಿಸಲಿದ್ದಾರೆ. ಅಲ್ಲದೆ ಪ್ರಮುಖ ಗಣ್ಯರು, ಫಲಾನುಭವಿಗಳು ಹಾಗೂ ಸಾರ್ವಜನಿಕರ ಪಾಲ್ಗೊಳ್ಳಲಿರುವುದರಿಂದ ಜನಸಂದಣಿ ಮತ್ತು ವಾಹನ ಸಂದಣಿ ತಡೆಗಟ್ಟಲು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮತ್ತು ಕೆಲವು ಕಡೆ ಸಂಚಾರ ನಿಷೇಧಗೊಳಿಸಿ ಮಂಗಳೂರು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ವಾಹನ ಸಂಚಾರ ನಿಷೇಧ: ಲಾಲ್‌ಬಾಗ್ ಜಂಕ್ಷನ್‌ನಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ (ಲೇಡಿಹಿಲ್) ತನಕ ಸಮ್ಮೇಳನಕ್ಕೆ ಆಗಮಿಸುವ ವಾಹನಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ನೆಹರೂ ಅವೆನ್ಯೂ ರಸ್ತೆಯ ಇಕ್ಕೆಲಗಳಲ್ಲಿ ಕೂಡ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ವಿವಿಐಪಿಯವರು ಸಂಚರಿಸುವ (ಮೇರಿಹಿಲ್ ಹೆಲಿಪ್ಯಾಡ್‌ನಿಂದ ಕೆಪಿಟಿ ಮುಖಾಂತರ ಕರಾವಳಿ ಮೈದಾನ) ರಸ್ತೆಯ ಇಕ್ಕೆಲಗಳಲ್ಲಿ ಕೂಡ ವಾಹನ ನಿಲುಗಡೆ ನಿಷೇಧಿಸಲಾಗಿದೆ.

*ಬಲ್ಲಾಳ್‌ಬಾಗ್: ನಗರದಿಂದ ಕೊಟ್ಟಾರ ಚೌಕಿ ಕಡೆಗೆ ಹಾಗೂ ಉರ್ವ ಮಾರ್ಕೆಟ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಬಲ್ಲಾಳ್‌ಬಾಗ್‌ನಿಂದ ಎಡಕ್ಕೆ ತಿರುಗಿ ವೇರ್‌ಹೌಸ್ ಜಂಕ್ಷನ್-ದುರ್ಗಾಮಹಲ್ ಜಂಕ್ಷನ್-ಮಣ್ಣಗುಡ್ಡದಿಂದಾಗಿ ಉರ್ವ ಮಾರ್ಕೆಟ್ ಜಂಕ್ಷನ್-ಅಶೋಕನಗರ-ಕೊಟ್ಟಾರ ಚೌಕಿ ಕಡೆಗೆ ಸಂಚರಿಸುವುದು.

*ಮಣ್ಣಗುಡ್ಡ ಜಂಕ್ಷನ್: ಬಲ್ಲಾಳ್‌ಬಾಗ್ ಹಾಗೂ ಕುದ್ರೋಳಿ ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ ಹೋಗುವ ವಾಹನಗಳು ಉರ್ವ ಮಾರ್ಕೆಟ್- ಅಶೋಕನಗರ ಮೂಲಕ ಸಂಚರಿಸುವುದು. 

*ಉರ್ವ ಮಾರ್ಕೆಟ್ ರಸ್ತೆಯ ಚರ್ಚ್ ರಸ್ತೆಯ ಬಳಿ: ಉರ್ವ ಮಾರ್ಕೆಟ್ ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ ಹೋಗುವ ವಾಹನಗಳು ಉರ್ವ ಮಾರ್ಕೆಟ್ ಮೂಲಕ ಅಶೋಕನಗರ-ಉರ್ವಸ್ಟೋರ್ ಮೂಲಕ ಸಂಚರಿಸುವುದು.

*ಕೋಟೆಕಣಿ ಕ್ರಾಸ್: ಉರ್ವಸ್ಟೋರ್, ಅಶೋಕನಗರ ಕಡೆಯಿಂದ ಮಂಗಳೂರು ಕಡೆಗೆ ಬರುವ ವಾಹನಗಳು ಕೋಟೆಕಣಿ ಕ್ರಾಸ್‌ನಲ್ಲಿ ಎಡಕ್ಕೆ ತಿರುವು ಪಡೆದುಕೊಂಡು ದಡ್ಡಲ್‌ಕಾಡು ಜಂಕ್ಷನ್ ಕಾಡಪಿಕಾಡು-ಕುಂಟಿಕಾನ ಅಥವಾ ಕೆಎಸ್‌ಆರ್‌ಟಿಸಿ ಮೂಲಕ ಮುಂದುವರೆಯುವುದು.

*ಕೆಎಸ್‌ಆರ್‌ಟಿಸಿ ಜಂಕ್ಷನ್: ಬಿಜೈ ಚರ್ಚ್ ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ ಸಂಚರಿಸುವ ವಾಹನಗಳು ಕೆಎಸ್‌ಆರ್‌ಟಿಸಿ ಜಂಕ್ಷನ್ ಮೂಲಕ ಕೊಟ್ಟಾರ ಕ್ರಾಸ್‌ನಿಂದಾಗಿ ಅಥವಾ ಕುಂಟಿಕಾನ ಜಂಕ್ಷನ್ ಮುಖಾಂತರ ಸಂಚರಿಸುವುದು. ಬಿಜೈ ಚರ್ಚ್ ಕಡೆಯಿಂದ ಉರ್ವ ಮಾರ್ಕೆಟ್ ಕಡೆಗೆ ಸಂಚರಿಸುವ ವಾಹನಗಳು ಕೆಎಸ್‌ಆರ್‌ಟಿಸಿ ಜಂಕ್ಷನ್-ಲಾಲ್‌ಬಾಗ್-ಬಲ್ಲಾಳ್‌ಬಾಗ್ ಜಂಕ್ಷನ್-ಮಣ್ಣಗುಡ್ಡ ಮುಖಾಂತರ ಮುಂದುವರಿಯುವುದು. 

*ಕೊಟ್ಟಾರ ಚೌಕಿ: ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಕೊಟ್ಟಾರ ಚೌಕಿ-ಕೆಪಿಟಿ ನಂತೂರು ಅಥವಾ ಪಂಪ್‌ವೆಲ್ ಮೂಲಕ ನಗರಕ್ಕೆ ಸಂಚರಿಸುವುದು.

*ಪಡೀಲ್ ಜಂಕ್ಷನ್: ಬಂಟ್ವಾಳ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು ಪಡೀಲ್-ನಂತೂರು-ಕೆಪಿಟಿ ಕಡೆಯಿಂದ ಲಾಲ್‌ಬಾಗ್ ಕಡೆಗೆ ಸಂಚರಿಸಿ ನಿಗದಿಪಡಿಸಿದ ನಿಲುಗಡೆ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು.

ಪಾರ್ಕಿಂಗ್ ಸ್ಥಳಗಳ ವಿವರ

ಸರಕಾರಿ ವಾಹನಗಳಿಗೆ ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣ, ವಿಐಪಿ ವಾಹನಗಳಲ್ಲಿ ಕೊಟ್ಟಾರ ಚೌಕಿ, ಕುಂಟಿಕಾನ ಕೆಪಿಟಿ ಕಡೆಯಿಂದ ಬರುವ ಕಾರುಗಳಿಗೆ ಆಫೀಸರ್ ಕ್ಲಬ್ ಮೈದಾನ, ಹ್ಯಾಟ್‌ಹಿಲ್ ರಸ್ತೆ, ಪಿವಿಎಸ್ ಕಡೆಯಿಂದ ಬರುವ ಕಾರುಗಳಿಗೆ ಉರ್ವ ಕೆನರಾ ಹೈಸ್ಕೂಲ್ ಮೈದಾನ, ಕೊಟ್ಟಾರಿ ಕಡೆಯಿಂದ ಬರುವ ಕಾರುಗಳಿಗೆ ಹಾಗೂ ಕುದ್ರೋಳಿ ಕಡೆಯಿಂದ ಬರುವ ಕಾರುಗಳಿಗೆ ಲೇಡಿಹಿಲ್ ವಿಕ್ಟೋರಿಯಾ ವಿದ್ಯಾಸಂಸ್ಥೆಯ ಬಲಗಡೆ ಮೈದಾನ, ಮುಲ್ಕಿ, ಉಳ್ಳಾಲ, ಪುತ್ತೂರು ಕಡೆಯಿಂದ ಬರುವ ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಕುಳೂರು ಗೋಲ್ಡ್ ಪಿಂಚ್ ಮೈದಾನ, ಮಂಗಳೂರಿನಿಂದ ಬರುವ ಬಸ್‌ಗಳಿಗೆ ಉರ್ವ ಮಾರ್ಕೆಟ್ ಮೈದಾನ, ಮೂಡುಬಿದಿರೆ ಕಡೆಯಿಂದ ಬರುವ ಬಸ್‌ಗಳಿಗೆ ಲೇಡಿಹಿಲ್ ಚರ್ಚ್ ಮೈದಾನ, ದ್ವಿಚಕ್ರ ವಾಹನಗಳಿಗೆ ಲೇಡಿಹಿಲ್ ವಿಕ್ಟೋರಿಯಾ ಸ್ಕೂಲ್ ಎಡಗಡೆಯ ಮೈದಾನ, ಲೇಡಿಹಿಲ್ ಚರ್ಚ್ ಮೈದಾನ, ಉರ್ವ ಕೆನರಾ ಸ್ಕೂಲ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.

Similar News