ಉಮ್ರಾ ಯಾತ್ರೆಗೆ ತೆರಳಿದ್ದ ವಿಟ್ಲ ಮೂಲದ ವ್ಯಕ್ತಿ ಮೃತ್ಯು
Update: 2023-03-15 14:58 IST
ವಿಟ್ಲ, ಮಾ.15: ಉಮ್ರಾ ಯಾತ್ರೆಗೆ ತೆರಳಿದ್ದ ವಿಟ್ಲದ ವ್ಯಕ್ತಿಯೋರ್ವರು ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.
ವಿಟ್ಲ ಕೊಳಂಬೆ ನಿವಾಸಿ ಹಸನಬ್ಬ ಮೃತರು ಎಂದು ತಿಳಿದು ಬಂದಿದೆ. ಅವರು ಕಳೆದ ವಾರ ಕುಟುಂಬಸ್ಥರ ಜೊತೆ ಉಮ್ರಾ ಯಾತ್ರೆ ನಿರ್ವಹಿಸಲು ಸೌದಿ ಅರೇಬಿಯಾಗೆ ತೆರಳಿದ್ದರು. ನಿನ್ನೆ ಸೌದಿ ಅರೇಬಿಯಾದಲ್ಲಿ ಮಗನ ರೂಂನಲ್ಲಿ ಮಲಗಿದ್ದ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅವರು ಪತ್ನಿ ಮತ್ತು ಮಕ್ಕಳ ಜೊತೆ ಸೌದಿಗೆ ತೆರಳಿ ಉಮ್ರಾ ನಿರ್ವಹಿಸುವ ಉದ್ದೇಶವನ್ನು ಹೊಂದಿದ್ದರು.ಇದೀಗ ಅವರ ಅಕಾಲಿಕ ಮರಣದಿಂದ ಕುಟುಂಬಸ್ಥರಲ್ಲಿ ದುಃಖ ಉಂಟು ಮಾಡಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.