ವಿಟ್ಲ: ಮಹಿಳೆ ಆತ್ಮಹತ್ಯೆ

Update: 2023-03-15 14:09 GMT

ವಿಟ್ಲ: ವಿವಾಹಿತ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ವಿಟ್ಲದ ಮೈರ ಕರವೀರ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಪದ್ಮನಿ (35) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ.

ಪದ್ಮನಿ ಅವರು ವಿವಾಹಿತೆಯಾಗಿದ್ದು, ಪತಿಯನ್ನು ತೊರೆದು ತಂದೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.

ಪದ್ಮನಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಮಾ.15ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ತಂದೆ, ಓರ್ವ ಪುತ್ರಿಯನ್ನು‌ ಅಗಲಿದ್ದಾರೆ.

Similar News