ಯೆನೆಪೋಯ ಸಂಸ್ಥೆಯಲ್ಲಿ ಬಿಎ -ಕಮ್ಯುನಿಕೇಶನ್ ಡಿಸೈನ್, ಫ್ಯಾಶನ್ ಡಿಸೈನ್ ಪದವಿ ಕೋರ್ಸ್‌ಗೆ ಚಾಲನೆ

Update: 2023-03-15 17:42 GMT

ಮಂಗಳೂರು: ಯೆನೆಪೋಯ ವಿವಿಯ ಘಟಕವಾಗಿರುವ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್  ಆ್ಯಂಡ್  ಮ್ಯಾನೇಜ್‌ಮೆಂಟ್ (ವೈಐಎಎಸ್‌ಸಿಎಂ)ಸಂಸ್ಥೆಯಲ್ಲಿ ಆರಂಭಗೊಳ್ಳಲಿರುವ    ಬಿಎ (ಆನರ್ಸ್) -ಕಮ್ಯುನಿಕೇಶನ್  ಡಿಸೈನ್  ಮತ್ತು ಫ್ಯಾಶನ್ ಡಿಸೈನ್  ಕೋರ್ಸ್‌ಗೆ ಬುಧವಾರ ಚಾಲನೆ ನೀಡಲಾಯಿತು.

ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೊಚ್ಚಿ ಕ್ರಿಯೇಟಿವ್ ಎಜುಕೇಶನ್‌ನ ಪ್ರಾಜೆಕ್ಟ್ ಹೆಡ್ ವರುಣನ್ ಬಾಲಸುಬ್ರಮಣ್ಯಂ ಉದ್ಘಾಟಿಸಿ, ಕೋರ್ಸ್‌ಗಳ ಪರಿಚಯ ಮಾಡಿದರು.

ಇದೇ ಸಂದರ್ಭದಲ್ಲಿ ಕೋರ್ಸ್‌ನ ಪರಿಚಯ ಪತ್ರವನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಮುಂಬೈ ಎಫ್‌ಐಸಿಸಿಐ ಅಧ್ಯಕ್ಷ  ಆಶಿಶ್ ಕುಲಕರ್ಣಿ ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು.

ಯೆನೆಪೋಯ ವಿವಿ ಕುಸಚಿವ ಡಾ. ಗಂಗಾಧರ ಸೋಮಯಾಜಿ ಕೆ.ಎಸ್, ಯುಕೆ ಐಎಸ್‌ಡಿಸಿಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ  ಡಾ. ಟಾಮ್ ಎಂ. ಜೋಸೆಫ್  ಅತಿಥಿಯಾಗಿದ್ದರು. ಪರೀಕ್ಷಾ ನಿಯಂತ್ರಕ ಡಾ.ಬಿ.ಟಿ. ನಂದೀಶ್, ಉಪಪ್ರಾಂಶುಪಾಲರಾದ  ಡಾ. ಶರೀನಾ ಪಿ, ಡಾ. ಜೀವನ್ ರಾಜ್, ಡಾ. ನಾರಾಯಣ್ ಸುಕುಮಾರ್ ಉಪಸ್ಥಿತರಿದ್ದರು.

ಯೆನೆಪೋಯ  ಡೀಮ್ಡ್  ವಿವಿ ಉಪಕುಲಪತಿ ಡಾ. ಎಂ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೈಐಎಎಸ್‌ಸಿಎಂ  ಪ್ರಾಂಶುಪಾಲರು ಮತ್ತು ವಿಜ್ಞಾನ ವಿಭಾಗದ ಡೀನ್ ಡಾ. ಅರುಣ್ ಭಾಗವತ್ ಸ್ವಾಗತಿಸಿದರು. ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ವಿಭಾಗದ ಪ್ರೊಫೆಸರ್ ಡಾ. ಸವಿತಾ ವಂದಿಸಿದರು.

Similar News