×
Ad

ಎ.2ರಂದು ಮೆಗಾ ಬ್ಯಾಡ್ಮಿಂಟನ್ ಮಹಿಳಾ ಪ್ರೀಮಿಯರ್ ಲೀಗ್

Update: 2023-03-18 18:52 IST

ಮಂಗಳೂರು, ಮಾ. 18: ಇಲ್ಲಿನ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಎ.2ರಂದು ಮೆಗಾ ಬ್ಯಾಡ್ಮಿಂಟನ್ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾಟ ಆಯೋಜಿಸಲಾಗಿದೆ ಎಂದು ಪಂದ್ಯಾಟ ಆಯೋಜಕಿ ವಿಜೇತ ಸನತ್ ಶನಿವಾರ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಬೆಳಗ್ಗೆ 7ರಿಂದ ಪಂದ್ಯಾಟ ಆರಂಭವಾಗಲಿದೆ. ಪೂರ್ವಾಹ್ನ 10 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಯು.ಟಿ.ಖಾದರ್ ಮತ್ತಿತರ ಗಣ್ಯರು ಭಾಗವಹಿಸುವರು. ಬ್ಯಾಡ್ಮಿಂಟನ್ ಪಂದ್ಯಾಟ ವೃತ್ತಿಪರರು, ಹವ್ಯಾಸಿ, ಇಂಟರ್‌ಮೀಡಿಯೇಟ್, ಮಾಸ್ಟರ್ಸ್‌, ಜಂಬಲ್ಡ್ ಹೀಗೆ ವಿವಿಧ ವಿಭಾಗಗಳಲ್ಲಿ  ನಡೆಯಲಿದೆ. ವಿಜೇತರಿಗೆ ಮೊದಲ ಬಹುಮಾನ 18 ಸಾವಿರ ರೂ. ಮತ್ತು ಟ್ರೋಫಿ, ದ್ವಿತೀಯ 13 ಸಾವಿರ ರೂ. ಮತ್ತು ಟ್ರೋಫಿ, ತೃತೀಯ ಟ್ರೋಫಿ ಮತ್ತು ಮೆಡಲ್‌ಗಳು ದೊರೆಯಲಿದೆ ಎಂದವರು ಹೇಳಿದರು.

ಮಂಗಳೂರು, ಉಡುಪಿ, ಪುತ್ತೂರು, ಹಾಸನ, ಶಿವಮೊಗ್ಗ, ಭದ್ರಾವತಿ ಮೊದಲಾದೆಡೆಗಳಿಂದ ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಒಟ್ಟು ಐದು ಮಂದಿ ಮಾಲಕರ ಐದು ತಂಡಗಳು, 65 ಆಟಗಾರರು ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ. 20 ವಯೋಮಿತಿಯಿಂದ 65+ ವಯೋಮಿತಿ ವರೆಗಿನ ಮಹಿಳಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ವಿಜೇತಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟಕಿಯರಾದ ವಿದ್ಯಾ ಸಂತೋಷ್, ಕನ್ಯಾಕುಮಾರಿ, ವೀಣಾ ಶೆಟ್ಟಿ, ಜೋತ್ಸಾ  ಉಪಸ್ಥಿತರಿದ್ದರು.

Similar News