×
Ad

ಬೆಂಗಳೂರು | ಉದ್ಯಮಿಯ ಹನಿಟ್ಯ್ರಾಪ್ ಆರೋಪ: ನಾಲ್ವರ ವಿರುದ್ಧ ಪ್ರಕರಣ ದಾಖಲು

Update: 2023-03-19 20:43 IST

ಬೆಂಗಳೂರು, ಮಾ.19: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಮಹಿಳೆಯ ಆಹ್ವಾನ ನಂಬಿ ಹೋದ ಉದ್ಯಮಿಯೊಬ್ಬರು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿರುವ ಸಂಬಂಧ ಮಹಿಳೆ ಸೇರಿ ನಾಲ್ವರ ವಿರುದ್ಧ ಇಲ್ಲಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರಿಗೆ ಟೆಲಿಗ್ರಾಂ ಮೂಲಕ ಆರೋಪಿ ಮಹಿಳೆಯ ಪರಿಚಯವಾಗಿದ್ದು, ನಂತರ ಪರಸ್ಪರ ವಾಟ್ಸಾಪ್‍ನಲ್ಲಿ  ಸಂಪರ್ಕಹೊಂದಿದ್ದರು. ಮಾ.3ರಂದು ತನ್ನ ಫೋಟೋ ಮತ್ತು ಲೊಕೇಶನ್ ಕಳುಹಿಸಿ ದೂರುದಾರರನ್ನು ಜೆ.ಪಿ.ನಗರದ 5ನೆ ಹಂತದಲ್ಲಿರುವ ಬಹುಮಹಡಿ ಕಟ್ಟಡಕ್ಕೆ ಕರೆಸಿಕೊಂಡಿದ್ದಳು. ಆನಂತರ, ತನ್ನ ತಂಡದೊಂದಿಗೆ ಆರೋಪಿಯನ್ನು ಬೆದರಿಸಿ ನಗದುವಸೂಲಿ ಮಾಡಿದ್ದಾರೆ ಎನ್ನಲಾಗಿದೆ.

ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೇರುವುದಾಗಿ ಘೋಷಿಸಿದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ

Similar News