ಮಂಗಳೂರು | ರಮಝಾನ್ ತಿಂಗಳ ಚಂದ್ರದರ್ಶನದ ಮಾಹಿತಿಗೆ ಮನವಿ

Update: 2023-03-20 11:07 GMT

ಮಂಗಳೂರು, ಮಾ.20: ರಮಝಾನ್ ತಿಂಗಳ ಪ್ರಥಮ ಚಂದ್ರ ದರ್ಶನವು ಮಾ.22ರ ರಾತ್ರಿ ಆಗುವ ಸಾಧ್ಯತೆ ಇದೆ. ಆದ್ದರಿಂದ ಚಂದ್ರದರ್ಶನವಾದಲ್ಲಿ ಮುಸ್ಲಿಮರು ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರ ನಿರ್ದೇಶನದಂತೆ ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿಯವರ ಗಮನಕ್ಕೆ ತರುವಂತೆ ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಹಾಜಿ ಸೈಯದ್ ಅಹ್ಮದ್ ಬಾಷಾ ತಂಙಳ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ದೂರವಾಣಿ ಸಂಖ್ಯೆ 0824 2428989, ಮೊ.ಸಂ.: 9567065737, 9481271477, 9448143937 ಅನ್ನು ಸಂಪರ್ಕಿಸಬಹುದು.

Similar News