ಉಡುಪಿ: ಇಂದಿನಿಂದ (ಮಾ.20) ಕುರಿಯ ಸಾಂಸ್ಕೃತಿಕ ಪ್ರತಿಷ್ಠಾನದ ಯಕ್ಷಗಾನ-ತಾಳಮದ್ದಲೆ ಸಪ್ತಾಹ

Update: 2023-03-20 08:32 GMT

ಉಡುಪಿ, ಮಾ.20: ಉಜಿರೆಯ ಕುರಿಯ ವಿಠ್ಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮಾ.20ರಿಂದ 26ರವರೆಗೆ  ‘ಶ್ರೀ ಕೃಷ್ಣ ರಸಾಯನಂ’ಯಕ್ಷಗಾನ-ತಾಳಮದ್ದಲೆ ಸಪ್ತಾಹವನ್ನು ಆಯೋಜಿಸಿದೆ.

ಕುರಿಯ ಪ್ರತಿಷ್ಠಾನದ ರಜತ ಮಹೋತ್ಸವದ ಅಂಗವಾಗಿ ಗುರಿಕ್ಕಾರ ನೆಡ್ಲೆ ನರಸಿಂಹ ಭಟ್ ಅವರ ಸ್ಮರಣಾರ್ಥ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಈ ಕಾರ್ಯಕ್ರಮ ಪ್ರತಿದಿನ ಸಂಜೆ 7ರಿಂದ ರಾತ್ರಿ 9:45ರ ವರೆಗೆ ನಡೆಯಲಿದೆ.

ಮಾ.20ರಂದು ಸ್ಯಮಂತಕಮಣಿ, ಮಾ.21ರಂದು ಹರಿ ದರ್ಶನ, ಮಾ.22ರಂದು ಕರ್ಣ ಭೇದನ, ಮಾ.23ರಂದು ಗಾಂಡೀವಿ ಪ್ರತಿಜ್ಞೆ, ಮಾ.24ರಂದು ವಿದುರಾತಿಥ್ಯ, ಮಾ.25ರಂದು ಸುದರ್ಶನಗ್ರಹಣ ಮತ್ತು ಮಾ.26ರಂದು ಕೃಷ್ಣ ದರ್ಶನ ಎಂಬ ತಾಳೆಮದ್ದಳೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News