ಕರವೇ ಬೆಳ್ಳಿ ಹಬ್ಬ ಸಂಭ್ರಮ: ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಸೇರಿದಂತೆ 7 ಜನ ಸಾಧಕರಿಗೆ ಪ್ರಶಸ್ತಿ

Update: 2023-03-22 08:49 GMT

ಬೆಂಗಳೂರು: ಮಾ.24ರಂದು (ಶುಕ್ರವಾರ)  'ಕರ್ನಾಟಕ‌ ರಕ್ಷಣಾವೇದಿಕೆ' (ಕರವೇ)ಯು ತನ್ನ ಬೆಳ್ಳಿ ಹಬ್ಬ ಆಚರಣೆಯ ಅಂಗವಾಗಿ  ನಾಡಿನ ಹಿರಿಯ ಪತ್ರಕರ್ತರಾದ ಬಿ.ಎಂ. ಹನೀಫ್ ಹಾಗೂ ಚಿತ್ರನಟ, ನಿರ್ಮಾಪಕ ದ್ವಾರಕೀಶ್ ಸೇರಿದಂತೆ ವಿವಿಧ ಕ್ಷೇತ್ರಗಳ ಏಳು ಜನ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ನೀಡಿ‌ ಗೌರವಿಸುತ್ತಿದೆ. 

ಹಿರಿಯ ಪತ್ರಕರ್ತರಾದ  ಬಿ.ಎಂ. ಹನೀಫ್  ಅವರಿಗೆ ಪತ್ರಿರಂಗದ ಭೀಷ್ಮ ಕೆ. ಶಾಮರಾವ್ ಪ್ರಶಸ್ತಿ, ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಗಳಾದ ಡಾ. ಎನ್ ಆರ್ ಶೆಟ್ಟಿ, ಅವರಿಗೆ ವಿಶ್ವಗುರು ಶ್ರೀಬಸವೇಶ್ವರ ಪ್ರಶಸ್ತಿ , ಹಿರಿಯ ಸಾಹಿತಿ ಡಾ.ಭೈರಮಂಗಲ ರಾಮೇಗೌಡ ಅವರಿಗೆ ರಾಷ್ಟ್ರ ಕವಿ ಕುವೆಂಪು ಪ್ರಶಸ್ತಿ, ಚಿತ್ರನಟ.ನಿರ್ಮಾಪಕ ದ್ವಾರಕೀಶ್ ಅವರಿಗೆ ವರನಟ ಡಾ. ರಾಜಕುಮಾರ್ ಪ್ರಶಸ್ತಿ, ಹಿರಿಯ ರಾಜಕಾರಣಿ ಪಿ ಜಿ ಆರ್ ಸಿಂಧ್ಯಾ, ಅವರಿಗೆ ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ರೈತ ಹೋರಾಟಗಾರ ವೀರಸಂಗಯ್ಯ ಅವರಿಗೆ ಎಂ.ಡಿ‌ ನಂಜುಂಡಸ್ವಾಮಿ ಪ್ರಶಸ್ತಿ, ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಜಾನಪದ ಜಂಗಮ ಡಾ ಎಸ್ ಕೆ ಕರೀಂಖಾನ್ ಪ್ರಶಸ್ತಿ ನೀಡಲು ಕರವೇ ನಿರ್ಧರಿಸಿದೆ.

ಪ್ರಶಸ್ತಿಗಳು 50ಸಾವಿರೂ ನಗದು, ಪ್ರಶಸ್ತಿ ಫಲಕವನ್ನು ಹೊಂದಿದ್ದು. ಮಾ.24;ರಂದು ಗಾಯತ್ರಿ ವಿಹಾರ ಅರಮನೆ ಮೈದಾನ ಇಲ್ಲಿ‌ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕರವೇ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Similar News