ದ್ವಿತೀಯ ಪಿಯುಸಿ ಪರೀಕ್ಷೆ: ದ.ಕ.ಜಿಲ್ಲೆಯಲ್ಲಿ 335 ವಿದ್ಯಾರ್ಥಿಗಳು ಗೈರು

Update: 2023-03-23 14:44 GMT

ಮಂಗಳೂರು, ಮಾ.23: ದ.ಕ.ಜಿಲ್ಲೆಯ 52 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 335  ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಇಂಗ್ಲಿಷ್ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 32,208 ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ 32,910 ವಿದ್ಯಾರ್ಥಿಗಳು ಹಾಜರಾಗಿದ್ದರೆ, 298 ಮಂದಿ ಗೈರಾಗಿದ್ದಾರೆ. ಇದೇ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 162 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 125 ಮಂದಿ  ಹಾಜರಾಗಿದ್ದರೆ, 37 ಮಂದಿ ಗೈರಾಗಿದ್ದಾರೆ ಎಂದು ಡಿಡಿಪಿಯು ಪ್ರಕಟನೆ ತಿಳಿಸಿದೆ.

Similar News