×
Ad

​ಮಹಿಳೆ ನಾಪತ್ತೆ

Update: 2023-03-23 20:16 IST

ಮಂಗಳೂರು, ಮಾ.23: ನಗರ ಹೊರವಲಯದ ಪಿಲಿಕುಳದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಲತಾ (30) ಎಂಬಾಕೆ  ನಾಪತ್ತೆಯಾಗಿದ್ದಾರೆ.

ಮಾ.21ರಂದು ಬೆಳಗ್ಗೆ 8ಕ್ಕೆ ಎಂದಿನಂತೆ ಮನೆಯಿಂದ ಕೆಲಸಕ್ಕೆ ತೆರಳಿದ್ದು, ಸಂಜೆ 7:30 ಆದರೂ ಮನೆಗೆ ಹಿಂತಿರುಗಿ ಬಂದಿಲ್ಲ. ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ. ಲತಾ ಬಗ್ಗೆ ಪಿಲಿಕುಳದಲ್ಲಿ  ವಿಚಾರಿಸಿದಾಗ ಕೆಲಸಕ್ಕೆ ಬಂದಿಲ್ಲವೆಂದು ತಿಳಿಸಿದ್ದಾರೆ. ನಂತರ ಸಂಬಂಧಿಕರನ್ನು ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಸುಮಾರು 5 ಅಡಿ ಎತ್ತರದ, ಎಣ್ಣೆ ಕಪ್ಪು ಮೈಬಣ್ಣದ, ಮನೆಯಿಂದ ಹೊರಡುವಾಗ ಚೂಡಿದಾರ್ ಧರಿಸಿದ್ದ ಲತಾ ತುಳು ಮತ್ತು ಕನ್ನಡ ಭಾಷೆ ಬಲ್ಲವರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Similar News